FILM
ಆತ್ಮಹತ್ಯೆಗೆ ಶರಣಾದ ಕನ್ನಡದ ಕಿರುತೆರೆ ನಟಿ ಶೋಭಿತಾ
ಹೈದರಾಬಾದ್ ಡಿಸೆಂಬರ್ 01: ಕನ್ನಡದ ಕಿರುತೆರೆ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ನವೆಂಬರ್ 30ರ ತಡರಾತ್ರಿ ಹೈದಾರಾಬಾದ್ ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಕಲೇಶಪುರ ಮೂಲದವರಾದ ಶೋಭಿತಾ ಶಿವಣ್ಣ ಮೊದಲಿನಿಂದಲೂ ನಟನೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಸಿಕ್ಕ ಅವಕಾಶವನ್ನೆಲ್ಲಾ ಬಳಸಿಕೊಂಡ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲೂ ಮಿಂಚಿದ್ದಾರೆ. ಕನ್ನಡದ ಬ್ರಹ್ಮಗಂಟು ನಿನ್ನಿಂದಲೇ ಧಾರಾವಾಹಿಯಲ್ಲಿ ನಟಿಸಿರುವ ಇವರು ಇತರ ಭಾಷೆಯ ಧಾರಾವಾಹಿಗಳಲ್ಲಿಯೂ ನಟಿಸಿದ್ದರು.
2 ವರ್ಷಗಳ ಹಿಂದೆ ಹಾಸನ ಮೂಲದ ಶೋಭಿತಾ ಮದುವೆಯಾಗಿ ಹೈದರಾಬಾದ್‌ನಲ್ಲಿ ಸೆಟಲ್ ಆಗಿದ್ದರು. ಬಣ್ಣದ ಲೋಕದಿಂದ ಅವರು ಅಂತರ ಕಾಯ್ದುಕೊಂಡಿದ್ದರು. ಇದೀಗ ಶೋಭಿತಾ ಆತ್ಮಹತ್ಯೆಯ ಸುದ್ದಿ ಕೇಳಿ, ಕುಟುಂಬಸ್ಥರಿಗೆ ಶಾಕ್ ಕೊಟ್ಟಿದೆ. ಇನ್ನೂ ಮರಣೋತ್ತರ ಪರೀಕ್ಷೆಯ ನಂತರ ನಟಿಯ ಮೃತದೇಹ ಬೆಂಗಳೂರಿಗೆ ತರುವ ಸಾಧ್ಯತೆಯಿದೆ. ಗಾಳಿಪಟ, ಮಂಗಳಗೌರಿ, ಕೋಗಿಲೆ, ಬ್ರಹ್ಮಗಂಟು, ಕೃಷ್ಣ ರುಕ್ಮಿಣಿ, ದೀಪವು ನಿನ್ನದೆ ಗಾಳಿಯು ನಿನ್ನದೆ, ಅಮ್ಮಾವ್ರು ಮತ್ತು ಮನೆದೇವರು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು