FILM
100 ದಿನಗಳ ನಂತರ ಮುಂಬೈಗೆ ಎಂಟ್ರಿ ಕೊಟ್ಟ ಕಂಗನಾ ರಾಣಾವತ್

ಮುಂಬೈ: ಬಾಲಿವುಡ್ ನ ಫೈರ್ ಬ್ರ್ಯಾಂಡ್ ನಟಿ ಕಂಗನಾ ರಣಾವತ್ ಮತ್ತೆ ಮುಂಬೈಗೆ ಆಗಮಿಸಿದ್ದಾರೆ. ಕಳೆದ ಬಾರಿ ಶಿವಸೇನೆಯ ಚಾಲೆಂಜ್ ಸ್ವೀಕರಿಸಿ ಭದ್ರತೆಯೊಂದಿಗೆ ಆಗಮಿಸಿ ಸವಾಲೆಸೆದಿದ್ದ ಕಂಗನಾ ಇಂದು ಬರೋಬ್ಬರಿ 104 ದಿನಗಳ ಬಳಿಕ ಮುಂಬೈಗೆ ಬಂದಿದ್ದು, ಇಂದು ನಗರದ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.
ಇಂದು ಬೆಳಗ್ಗೆ ಸೋದರಿ ರಂಗೋಲಿ ಜೊತೆ ಸಿದ್ಧಿವಿನಾಯಕ ಮಂದಿರಕ್ಕೆ ಆಗಮಿಸಿದ ಕಂಗನಾ ಪಕ್ಕಾ ಮರಾಠಿ ಮಹಿಳೆಯಂತೆ ಸೀರೆ ತೊಟ್ಟಿದ್ದರು. ಪೈಥಾನಿ ಸೀರೆ ತೊಟ್ಟು ಬಂದಿದ್ದ ಕಂಗನಾ ಎಲ್ಲರ ಗಮನ ಸೆಳೆದರು. ದೇವಾಸ್ಥಾನದಿಂದ ಹೊರ ಬರುತ್ತಿದ್ದಂತೆ ಗಣಪತಿ ಬಪ್ಪಾ ಮೋರಾಯ, ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದರು.

ಸೋಮವಾರ ಮನಾಲಿಯಿಂದ ಸೋದರಿ ಜೊತೆ ಮುಂಬೈಗೆ ಬಂದಿಳಿದಿದ್ದ ಕಂಗನಾ ಇಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ದೇವಸ್ಥಾನಕ್ಕೆ ಕಂಗನಾ ಭೇಟಿ ನೀಡಿರುವ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.