FILM
ಕಾಂತಾರ ಸಿನೆಮಾ ನೋಡಿ ನಡುಗುತ್ತಿದ್ದೇನೆ….ಕಂಗನಾ ರಾಣಾವತ್

ಮುಂಬೈ ಅಕ್ಟೋಬರ್ 21: ಬಾಲಿವುಡ್ ನ ರೆಬೆಲ್ ನಟಿ ಕಂಗನಾ ರಾಣಾವತ್ ಕೊನೆಗೂ ಕಾಂತಾರ ಸಿನೆಮಾ ನೋಡಿ..ಅದರ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದು, ಕಾಂತಾರ ಸಿನೆಮಾ ನೋಡಿ ನಾನು ನಡಗುತ್ತಿದ್ದೇನೆ ಎಂದಿದ್ದಾರೆ.
ಕಾಂತಾರ ಚಿತ್ರವನ್ನು ಕುಟುಂಬ ಸಮೇತ ನೋಡಿ ಬಂದಿದ್ದಾರೆ ಕಂಗನಾ. ಸಿನಿಮಾ ಯಾವ ರೀತಿಯ ಅನುಭವ ನೀಡಿತು ಎಂಬ ಬಗ್ಗೆ ವಿಡಿಯೋ ಮಾಡಿದ್ದಾರೆ. ‘ನಾನು ಕುಟುಂಬದವರ ಜತೆ ಕಾಂತಾರ ನೋಡಿ ಬಂದೆ. ಈಗಲೂ ನಾನು ಶೇಕ್ ಆಗುತ್ತಿದ್ದೇನೆ. ಎಂತಹ ಸ್ಫೋಟಕ ಅನುಭವ. ರಿಷಬ್ ಶೆಟ್ಟಿ ಅವರೇ ನಿಮಗೆ ಹ್ಯಾಟ್ಸ್ ಆಫ್. ಬರವಣಿಗೆ, ನಿರ್ದೇಶನ, ನಟನೆ, ಆ್ಯಕ್ಷನ್ ಎಲ್ಲವೂ ಬ್ರಿಲಿಯಂಟ್. ನಂಬೋಕೆ ಸಾಧ್ಯವಾಗುತ್ತಿಲ್ಲ’ ಎಂದು ವಿಡಿಯೋದಲ್ಲಿ ಕಂಗನಾ ಹೇಳಿದ್ದಾರೆ.

ಸಂಪ್ರದಾಯ, ಜಾನಪದ ವಿಚಾರ, ಸ್ಥಳೀಯ ಸಮಸ್ಯೆಗಳನ್ನು ಸಿನಿಮಾದಲ್ಲಿ ಹದವಾಗಿ ಬೆರೆಸಲಾಗಿದೆ. ಎಂಥ ಸುಂದರ ಛಾಯಾಗ್ರಹಣ, ಸಿನಿಮಾ ಎಂದರೆ ಇದು. ಒಂದು ವಾರಗಳ ಕಾಲ ಈ ಹ್ಯಾಂಗೋವರ್ನಿಂದ ಹೊರಬರಲು ಸಾಧ್ಯವಿಲ್ಲ’ ಎಂದು ಕಂಗನಾ ಘೋಷಿಸಿದ್ದಾರೆ.