LATEST NEWS
ಕಾಂತಾರ ನೋಡಲು ಕುತೂಹಲದಿಂದ ಕಾಯುತ್ತಿದ್ದೀನಿ – ಕಂಗನಾ ರಾಣಾವತ್

ಮುಂಬೈ ಅಕ್ಟೋಬರ್ 18: ಕಾಂತಾರ ಹಿಂದಿಯಲ್ಲೂ ತನ್ನ ಅಬ್ಬರ ಮುಂದುವರೆಸಿದ್ದು, ಇದೀಗ ಬಾಲಿವುಡ್ ತಾರೆಯರೂ ಕಾಂತಾರ ಸಿನೆಮಾಗೆ ಫಿದಾ ಆಗಿದ್ದಾರೆ. ಈಗಾಗಲೇ ಶಿಲ್ಪಾ ಶೆಟ್ಟಿ ಕಾಂತಾರ ಸಿನೆಮಾ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದು. ಇದೀಗ ಕಾಂತಾರ ನಟಿ ಕಂಗನಾ ರಣಾವತ್ ಸಿನಿಮಾ ನೋಡಲು ಕಾಯುತ್ತಿದ್ದೀನಿ ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಕಂಗನಾ ಕಾಂತಾರ ಸಿನಿಮಾ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದಾರೆ. ರಿಷಬ್ ಶೆಟ್ಟಿ ಅವರ ಪೋಸ್ಟರ್ ಶೇರ್ ಮಾಡಿ, ‘ಕಾಂತಾರ ಬಗ್ಗೆ ಅಸಾಧಾರಣವಾದ ವಿಷಯಗಳನ್ನು ಕೇಳಲು ತುಂಬಾ ಕುತೂಹಲವಾಗುತ್ತಿದೆ. ಕಾಂತಾರ ನೋಡಲು ಕುತೂಹಲದಿಂದ ಕಾಯುತ್ತಿದ್ದೀನಿ’ ಎಂದು ಹೇಳಿದರು.
