FILM
ಕಾಂತಾರ ನಟಿ ಸಪ್ತಮಿ ಗೌಡ ಹೊಸ ಪೋಟೋಶೂಟ್ ಫಿದಾ ಆದ ಅಭಿಮಾನಿಗಳು

ಬೆಂಗಳೂರು ಜೂನ್ 05: ಕಾಂತಾರದ ಸಿಂಗಾರ ಸಿರಿ ಸಪ್ತಮಿ ಗೌಡ ಹೊಸ ಪೋಟೋ ಶೂಟ್ ನ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆಂಗಳೂರಿನಲ್ಲಿ ಮಳೆ ಸುರಿದು ತಂಪಾದ ಕೂಲ್ ವಾತಾವರಣದಲ್ಲಿ ಅಷ್ಟೇ ಕೂಲ್ ಆಗಿ ಸಪ್ತಮಿ ಗೌಡ ಫೋಟೊಶೂಟ್ ಮಾಡಿಕೊಂಡಿದ್ದಾರೆ.
ವೈಟ್ ಸ್ಲಿವ್‌ಲೆಸ್ ಟಾಪ್, ನೀಲಿ ಬಣ್ಣದ ಸ್ಕರ್ಟ್ ತೊಟ್ಟು ಬೆಂಗಳೂರಿನ ರಸ್ತೆಯಲ್ಲಿ ನಿಂತು ಸ್ಟೈಲಿಶ್ ಆಗಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ನಟಿಯ ಬೋಲ್ಡ್ ಅವತಾರ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಪೋಟೋಗಳು ವೈರಲ್ ಆಗಿವೆ. ಸಾಮಾಜಿಕ ಜಾಲತಾಣದಲ್ಲಿ ಪೋಟೋ ಅಪ್ಲೋಡ್ ಮಾಡಿರುವ ಸಪ್ತಮಿ ಗೌಡ. ಪೋಟೋಗಳಿಗೆ ಅಭಿಮಾನಿಗಳು ಸಖತ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.
ಕನ್ನಡ, ಹಿಂದಿ ಮತ್ತು ತೆಲುಗಿನ ಚಿತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಸಪ್ತಮಿ ಗೌಡ ಬಹುಭಾಷಾ ತಾರೆಯಾಗಿದ್ದಾರೆ. ಜೊತೆಗೆ ಕನ್ನಡದಲ್ಲೇ ಅವರು ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.