LATEST NEWS
ಆರ್ ಸಿಬಿ ಪಂದ್ಯದಲ್ಲಿ ಕಾಂತಾರದ ಪಂಜುರ್ಲಿ ವೇಷ…!!

ಮಂಗಳೂರು ಎಪ್ರಿಲ್ 03: ಕಾಂತಾರ ಸಿನೆಮಾ ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿ ಕೋಟಿಗಟ್ಟಲೆ ಹಣ ಗಳಿಸಿದೆ. ಕರಾವಳಿಯ ದೈವಾರಾಧನೆಯನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿಯೂ ಕಾಂತಾರ ಸಿನೆಮಾಗೆ ಸಲ್ಲುತ್ತದೆ. ಆದರೆ ಕಾಂತಾರಾ ಸಿನೆಮಾದ ಬಳಿ ದೈವಾರಾಧನೆಯನ್ನು ಅಣಕ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಕಾಂತಾರದ ಪಂಜುರ್ಲಿ ದೈವ ಇದೀಗ ಎಲ್ಲಾ ರೀತಿಯ ಕಾರ್ಯಕ್ರಮಗಳಲ್ಲಿ ಕಾಣ ಸಿಗುವ ವೇಷ ರೀತಿ ಆಗಿದೆ.
ಇದೇ ರೀತಿ ನಿನ್ನೆ ನಡೆದ ಆರ್ಸಿಬಿ ಪಂದ್ಯದಲ್ಲೂ ಕಾಂತಾರದಲ್ಲಿ ಬರುವ ಪಂಜುರ್ಲಿ ದೈವದ ವೇಷವನ್ನು ಧರಿಸಿ ಕ್ರಿಕೆಟ್ ನೋಡುತ್ತಾ ಎಂಜಾಯ್ ಮಾಡುತ್ತಿರುವ ವ್ಯಕ್ತಿಯೊಬ್ಬರು ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ. ಸದ್ಯ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆರ್ ಸಿಬಿ ತನ್ನ ಖಾತೆಯಲ್ಲಿ ಪೋಟೋ ಹಂಚಿಕೊಂಡಿದೆ.

ಕಾಂತಾರದಲ್ಲಿ ಬರುವ ಪಂಜುರ್ಲಿ ದೈವವು ಕರಾವಳಿ ಮತ್ತು ತುಳು ನಾಡಿನ ಜನರ ನಂಬಿಕೆ. ಅನೇಕರು ಈ ದೈವವನ್ನು ಆರಾಧಿಸುತ್ತಾ ಬಂದಿದ್ದಾರೆ. ಇದೇ ವಿಚಾರವನ್ನು ಇಟ್ಟುಕೊಂಡು ಕಾಂತಾರ ಸಿನಿಮಾ ಮಾಡಲಾಗಿದೆ. ಅದು ಹಿಟ್ ಕೂಡ ಆಗಿದೆ. ಅದರಂತೆಯೇ ನಿನ್ನೆ ನಡೆದ ಆರ್ಸಿಬಿ ಫ್ಯಾನ್ ಪಂಜುರ್ಲಿ ದೈವದ ವೇಷ-ಭೂಷಣ ಧರಿಸಿಕೊಂಡು ಪಂದ್ಯ ನೋಡುತ್ತಾ ಎಂಜಾಯ್ ಮಾಡಿದ್ದಾರೆ. ಈ ಫೋಟೋವನ್ನು ಆರ್ಸಿಬಿ ಟ್ವಿಟ್ಟರ್ ಖಾತೆಯೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.ಪಂಜುರ್ಲಿ ದೈವದ ರೀತಿ ವೇಷ ಧರಿಸಿರುವುದಕ್ಕೆ ಕರಾವಳಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಕಾಂತಾರದ ಸಿನೆಮಾದಿಂದಾಗಿ ಇತ್ತೀಚೆಗೆ ಕರಾವಳಿಯ ದೈವಾರಾಧನೆಯನ್ನು ಅಣಕಿಸುವವರು ಸಂಖ್ಯೆ ಹೆಚ್ಚಾಗಿದೆ.