Connect with us

    LATEST NEWS

    ಉಡುಪಿ – ಕಂಬಳ ದಲ್ಲಿ ಹಲವು ಪ್ರಶಸ್ತಿ ಗೆದ್ದಿದ್ದ “ನಾಗು ಕೋಣ” ಸಾವು

    ಉಡುಪಿ ಜುಲೈ 27: ಕಂಬಳದಲ್ಲಿ ಹೆಸರು ಮಾಡುತ್ತಿರುವ ಕೋಣಗಳು ಅಕಾಲಿಕ ಸಾವು ಇದೀಗ ಕಂಬಳ ಅಭಿಮಾನಿಗಳಿಗೆ ಶಾಕ್ ನೀಡಿದೆ.


    ವಾರದ ಹಿಂದಷ್ಟೇ ಕಂಬಳ ಕ್ಷೇತ್ರದ ಉದಯೋನ್ಮುಖ ತಾರೆ ‘ಲಕ್ಕಿ’ ಎಂಬ ಹೆಸರಿನ ಕೋಣ ಸಾವನಪ್ಪಿದ್ದು, ಇದೀಗ ಉಭಯ ಜಿಲ್ಲೆಯ ಕೂಟಗಳಲ್ಲಿ ಹೆಸರು ಮಾಡಿದ್ದ ‘ನಾಗು’ ಎಂಬ ಕೋಣ ಶನಿವಾರ ಅಸುನೀಗಿದೆ.
    ಜಪ್ಪು ಮಂಕು ತೋಟ ಅನಿಲ್ ಶೆಟ್ಟಿಯವರ ಯಜಮಾನಿಕೆಯಲ್ಲಿ ನಾಗು ಎಂಬ ಶನಿವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ. ನಾಲ್ಕು ವರ್ಷಗಳ ಹಿಂದೆ ಹಲಗೆ ಸೀನಿಯರ್ ವಿಭಾಗಕ್ಕೆ ಎಂಟ್ರಿ ನೀಡಿದ್ದ ನಾಗು ಹಲವು ಕಂಬಳಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.

    ಬೈಂದೂರಿನಿಂದ ಎಲ್ಲರೂ ಬಂಢಾರಮನೆ ಸೇರಿದ್ದ ನಾಗು, ಬಳಿಕ ಉಡುಪಿ ಚಿತ್ಪಾಡಿ ಅಪ್ಪು ಶೆಟ್ಟಿ ಅವರ ಹಟ್ಟಿ ಸೇರಿದ್ದ. ಎರಡು ವರ್ಷಗಳ ಹಿಂದೆ ನಾಗು ಕೋಣವನ್ನು ಜಪ್ಪು ಮಂಕುತೋಟ ಅನಿಲ್ ಶೆಟ್ಟಿ ಅವರು ಖರೀದಿ ಮಾಡಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply