FILM
ಖ್ಯಾತ ನಿರೂಪಕಿ,ಮಾತಿನ ಮಲ್ಲಿ ‘ಅನುಶ್ರೀ’ಗೆ ‘ಕಲಾ ಶಿರೋಮಣಿ’ ಪ್ರಶಸ್ತಿ ಪ್ರದಾನ..!
ಬೆಂಗಳೂರು : ಕಿರುತೆರೆಯ ಖ್ಯಾತ ನಿರೂಪಕಿ, ತುಳುನಾಡ ಕುವರಿ ಮಾತಿನ ಮಲ್ಲಿ ಅನುಶ್ರೀ ಅವರಿಗೆ ಕುಳ್ಳೂರು ಗದ್ದುಗೆ ಮಹಾಸಂಸ್ಥಾನದ ಮಠದಿಂದ ‘ಕಲಾ ಶಿರೋಮಣಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅನುಶ್ರೀ ಅವರು ಕನ್ನಡದ ನಟಿಯಾಗಿ, ನಿರೂಪಕಿಯಾಗಿ ತಮ್ಮ ಸ್ಪಷ್ಟ ನಿರೂಪಣೆಗೆ ಹೆಸರುವಾಸಿಯಾಗಿದ್ದಾರೆ. ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿಯರಲ್ಲಿ ಒಬ್ಬರು. ಜೀ ಕನ್ನಡ ವಾಹಿಣನಿಯ ಸರಿಗಮಪ ರಿಯಾಲಿಟಿ ಶೋ ಕಾರ್ಯಕ್ರಮ ಅವರು ನಡೆಸಿಕೊಡುವ ಅತ್ಯುತ್ತಮ ಕಾರ್ಯಕ್ರಮವಾಗಿದೆ. ಸಿನಿಮಾಗಳ ಪ್ರೀ ರಿಲೀಸ್ ಶೋ, ರಿಯಾಲಿಟಿ ಶೋ ಹೀಗೆ ನೂರಾರು ಜನಪ್ರಿಯ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುವ ಅನುಶ್ರೀ ಕೆಲವೊಂದು ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ. ಅನುಶ್ರೀ ಅವರ ಸಾಧನೆ ಗುರುತಿಸಿ ಈಗಾಗಾಲೇ ನೂರಾರು ಪ್ರಶಸ್ತಿ, ಪುರಸ್ಕಾರಗಳು ಅರಸಿಕೊಂಡು ಬಂದಿವೆ.
ನಿರೂಪಕಿ ಎಂದಾಕ್ಷಣ ನೆನಪಗುವುದೇ ‘ಅನುಶ್ರೀ’ ಇಂದು ಅನುಶ್ರೀ ಅಷ್ಟೊಂದು ದೊಡ್ಡ ಖ್ಯಾತಿ ಪಡೆದಿದ್ದರೆ ಅದರ ಹಿಂದಿನ ನೋವಿನ ಕಥೆ ಕೂಡ ಅಷ್ಟೇ ದೊಡ್ಡದಿದೆ. ದಶಕಗಳ ಕಾಲ ಸಿನಿ ರಂಗ, ಕಿರು ತೆರೆ, ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಿರುವ ಅನುಶ್ರೀ ಗೆ ಈ ಯಶಸ್ಸು ಒಂದೇ ಸಲ ಸಿಕ್ಕಿಲ್ಲ. ಪಟ ಪಟ ಅಂತ ಮಾತನಾಡುತ್ತ, ಎಲ್ಲರ ಮುಖದಲ್ಲೂ ನಗು ಮೂಡಿಸುವ ಇವರ ಬದುಕಲ್ಲೂ ಕಣ್ಣೀರಿನ ಕಥೆಯಿದೆ.
ಕರಾವಳಿಯ ಖ್ಯಾತ ಚಾನೆಲ್ ‘ನಮ್ಮ ಟಿವಿ’ ಯ ಮೂಲಕ ತನ್ನ ಪ್ರಯಾಣ ಆರಂಭಿಸಿ ಬಂದರು ನಗರಿ ಮಂಗಳೂರಿನಿಂದ ಬಂದು, ಬೆಂಗಳೂರಿನಲ್ಲಿ ನೆಲೆನಿಂತು ಮಂಗಳೂರು ಕನ್ನಡ ಬಿಟ್ಟು ಬೆಂಗಳೂರು ಕನ್ನಡ ಕಲಿತು ಬಂದ ಕಷ್ಟ, ನೋವುಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಿ ಬಂದ ನೋವುಗಳನ್ನು ನುಂಗಿ ಪ್ರೇಕ್ಷಕರಿಗೆ ನಗುವನ್ನು ಮಾತ್ರ ನೀಡಿದ ಛಲಗಾರ್ತಿ ಕೂಡ ಹೌದು.
ತುಂಬ ಚೆನ್ನಾಗಿ ಡಾನ್ಸ್ ಮಾಡುವ ಅನುಶ್ರೀ, 75 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು ಬಂದು ಅಲ್ಲಿಯೂ ಸೈ ಎನಿಸಿದ್ದರು.ಕಿರು ತೆರೆಯಲ್ಲಿ ಸದಾ ಕಾಣಿಸಿಕೊಳ್ಳುವ ಇವರ ಜನಪ್ರಿಯತೆ ಯಾವ ಸಿನಿ ಕಲಾವಿದರಿಗಿಂತ ಕಡಿಮೆಯಿಲ್ಲ .