Connect with us

FILM

ಟಾಲಿವುಡ್ ಬ್ಯೂಟಿ ಕಾಜಲ್‌ ಅಗರ್‌ವಾಲ್ ಗೆ ಕಂಕಣ ಭಾಗ್ಯ

ಮುಂಬೈ ಅಕ್ಟೋಬರ್ 6: ನಟಿ ಕಾಜಲ್‌ ಅಗರ್‌ವಾಲ್‌ ಮತ್ತು ಬೆಂಗಳೂರು ಮೂಲದ ಉದ್ಯಮಿ ಗೌತಮ್‌ ಕಿಚ್ಲು ಅಕ್ಟೋಬರ್‌ 30ರಂದು ಮುಂಬೈನಲ್ಲಿ ಸಪ್ತಪದಿ ತುಳಿಯಲಿದ್ದು, ಈ ಬಗ್ಗೆ ಕಾಜಲ್‌ ಅವರೇ ಟ್ವೀಟ್‌ ಮೂಲಕ ಅಧಿಕೃತವಾಗಿ ದೃಢಪಟ್ಟಿದ್ದಾರೆ.
ಹಲವು ದಿನಗಳಿಂದಲೂ ಈ ಇಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿತ್ತು. ಕೆಲವು ದಿನಗಳ ಹಿಂದೆ ಇಬ್ಬರೂ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೂ ಇತ್ತು. ಇದಕ್ಕೆ ಪುಷ್ಟಿ ನೀಡುವಂತೆ ಈಗ ಇಬ್ಬರೂ ಮದುವೆಯಾಗುತ್ತಿದ್ದಾರೆ. 35ರ ಹರೆಯದ ಕಾಜಲ್ ಹಸೆಮಣೆ ಏರುತ್ತಿರುವ ಸುದ್ದಿ ಆಕೆಯ ಅಭಿಮಾನಿಗಳಲ್ಲಿ ಖುಷಿಗೆ ಕಾರಣವಾಗಿದೆ.

ಕಳೆದ ವರ್ಷ ಮಂಚು ಲಕ್ಷ್ಮಿ ಜೊತೆಗಿನ ಚಾಟ್‌ ವೇಳೆ ತಾನು ಮದುವೆಯಾಗುತ್ತಿರುವುದಾಗಿ ಕಾಜಲ್‌ ಹೇಳಿದ್ದು ಸುದ್ದಿಯಾಗಿತ್ತು. ‘ನಾನು ವೈವಾಹಿಕ ಜೀವನಕ್ಕೆ ಅಡಿ ಇಡಲು ಸಿದ್ಧಳಾಗುತ್ತಿರುವುದು ದಿಟ. ನನ್ನನ್ನು ಕೈಹಿಡಿಯಲಿರುವ ಸಂಗಾತಿಗೆ ಚಿತ್ರರಂಗದ ಪರಿಚಯವೇ ಇಲ್ಲ’ ಎಂದು ಆಕೆ ಹೇಳಿದ್ದು ಉಂಟು.

‘ಕೋವಿಡ್‌–19 ಪರಿಣಾಮ ಮುಂಬೈನಲ್ಲಿ ಎರಡು ಕುಟುಂಬದ ಸದಸ್ಯರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಇಬ್ಬರು ದಾಂಪತ್ಯ ಜೀವನ ಪ್ರವೇಶಿಸುತ್ತಿದ್ದೇವೆ. ಅದ್ದೂರಿಯಾಗಿ ಮದುವೆಯಾಗುತ್ತಿಲ್ಲ. ಸಣ್ಣ ಸಮಾರಂಭದಲ್ಲಿ ಹಸೆಮಣೆ ತುಳಿಯಲು ತೀರ್ಮಾನಿಸಿದ್ದೇವೆ’ ಎಂದಿರುವ ಕಾಜಲ್‌, ‘ಮದುವೆಯ ಬಳಿಕವೂ ನಾನು ಸಿನಿಮಾಗಳಲ್ಲಿ ನಟಿಸುತ್ತೇನೆ’ ಎಂದು ತಿಳಿಸಿದ್ದಾರೆ.

‘ನಾನು ಬೆಳ್ಳಿತೆರೆಯಲ್ಲಿ ಇಷ್ಟು ದೀರ್ಘಕಾಲ ಉಳಿಯಲು ಅಭಿಮಾನಿಗಳೇ ಕಾರಣ. ಇದೇ ಅಭಿಮಾನವನ್ನು ಮುಂದೆಯೂ ನನಗೆ ನೀಡಿ. ನಿಮ್ಮ ಆಶೀರ್ವಾದದಿಂದಲೇ ಹೊಸ ಪಯಣ ಆರಂಭಿಸಲು ನಿರ್ಧರಿಸಿದ್ದೇನೆ. ನಿಮ್ಮ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ’ ಎಂದು ತಿಳಿಸಿದ್ದಾರೆ.

ಪ್ರಸ್ತುತ ‘ಮೆಗಾಸ್ಟಾರ್’ ಚಿರಂಜೀವಿ ಹೀರೊ ಆಗಿರುವ ‘ಆಚಾರ್ಯ’ ಚಿತ್ರದಲ್ಲಿ ಕಾಜಲ್‌ ನಟಿಸುತ್ತಿದ್ದಾರೆ. ಇದನ್ನು ನಿರ್ದೇಶಿಸುತ್ತಿರುವುದು ಕೊರಟಾಲ ಶಿವ. ಶಂಕರ್‌ ನಿರ್ದೇಶನದ ‘ಇಂಡಿಯನ್‌ 2’ ಸಿನಿಮಾಕ್ಕೂ ಅವರೇ ಹೀರೊಯಿನ್. ಇದರಲ್ಲಿ ಕಮಲ ಹಾಸನ್‌ ನಟಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್‌

Share Information
Continue Reading
Advertisement
Click to comment

Leave a Reply

Your email address will not be published. Required fields are marked *