FILM
ಗಂಡು ಮಗುವಿನ ತಾಯಿಯಾದ ನಟಿ ಕಾಜಲ್ ಅಗರ್ ವಾಲ್….!!

ಬೆಂಗಳೂರು : ಖ್ಯಾತ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ಕಾಜಲ್ -ಗೌತಮ್ ಕಿಚ್ಲು ದಂಪತಿಗೆ ಗಂಡು ಮಗು ಜನಿಸಿದೆ ಎಂದು ಸಹೋದರಿ ನಿಶಾ ಅಗರ್‌ವಾಲ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗರ್‌ವಾಲ್ ಮತ್ತು ಗೌತಮ್ ಕಿಚ್ಲು ದಂಪತಿ 2020ರ ಅಕ್ಟೋಬರ್ 30ರಂದು ಮುಂಬೈನಲ್ಲಿ ವಿವಾಹವಾಗಿದ್ದರು. ಕಾಜಲ್– ಗೌತಮ್ ದಂಪತಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಜನವರಿಯಲ್ಲಿ ತಿಳಿಸಿದ್ದರು. ಜತೆಗೆ ಇದೇ ವಿಚಾರವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಬೇಬಿ ಬಂಪ್ ಫೋಟೊವನ್ನು ಹಂಚಿಕೊಂಡಿದ್ದರು.

ಇದೀಗ ಮಗುವಿನ ಆಗಮನ ಖುಷಿಯಲ್ಲಿರುವ ದಂಪತಿ ತಮ್ಮ ಮಗುವಿನ ಹೆಸರನ್ನು ರಿವೀಲ್ ಮಾಡಿದ್ದು, ನೀಲ್ ಕಿಚ್ಲು’ ಎಂದು ನಾಮಕರಣ ಮಾಡಿದ್ದಾರೆ. ಈ ಕುರಿತು ಗೌತಮ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.