Connect with us

LATEST NEWS

ಕಸಾಯಿಖಾನೆ ಅನುದಾನ ವಿವಾದ – ಪ್ರಧಾನಿಗೆ ಪತ್ರ ಬರೆದ ಸಚಿವ ಖಾದರ್

ಕಸಾಯಿಖಾನೆ ಅನುದಾನ ವಿವಾದ – ಪ್ರಧಾನಿಗೆ ಪತ್ರ ಬರೆದ ಸಚಿವ ಖಾದರ್

ಮಂಗಳೂರು ಅಕ್ಟೋಬರ್ 16: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಕುದ್ರೋಳಿ ಕಸಾಯಿ ಖಾನೆಗೆ ಅನುದಾನ ನೀಡಿದ್ದಕ್ಕೆ ಉಂಟಾಗಿರುವ ವಿವಾದ ಹಾಗೂ ಹೇಳಿಕೆಗಳಿಗೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಬೇಸರ ವ್ಯಕ್ತಪಡಿಸಿದ್ದು, ಈ ಅನುದಾನದ ಕುರಿತಂತೆ ಪ್ರಧಾನಿ ಹಾಗೂ ಸಂಬಂಧಪಟ್ಟ ಸಚಿವರಿಗೆ ವಿವರವಾದ ಪತ್ರ ಬರೆಯುವುದಾಗಿ ಸಚಿವ ಖಾದರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಅಭಿವೃದ್ದಿಗೆ ಪೂರಕವಾಗಿ ಕುದ್ರೋಳಿ ಕಸಾಯಿ ಖಾನೆಗೆ ಅನುದಾನವನ್ನು ನೀಡಿದ್ದು, ಇದನ್ನು ಜನ ಪ್ರತಿನಿಧಿಗಳು , ಇತರ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿರುವುದು ವಿಷಾಧನೀಯ ಎಂದರು, ಅಲ್ಲದೆ ನನ್ನ ಮೇಲೆ ಆರೋಪ ಹೋರಿಸಲಾಗುತ್ತಿದ್ದು, ಇದು ಬೇಸರ ತರಿಸಿದೆ ಎಂದು ಹೇಳಿದರು.

ಈ ಹಿನ್ನಲೆಯಲ್ಲಿ ಈ ವಿಷಯದಲ್ಲಿ ಆರೋಪ- ಪ್ರತ್ಯಾರೋಪಗಳ ಮೂಲಕ ಜನರ ಮಧ್ಯೆ ಗೊಂದಲ ಸೃಷ್ಠಿಸುವುದು ಬೇಡ ಎಂದು , ಈ ಅನುದಾನ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನಗರಾಭಿವೃದ್ದಿ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಅಲ್ಲದೆ ಈ ಅನುದಾನಕ್ಕೆ ಅನುಮತಿ ನೀಡುವ ವೇಳೆ ಗೋಶಾಲೆಗೆ ಅನುದಾನ ನೀಡುವ ವಿಚಾರವನ್ನು ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *