LATEST NEWS
ಶಾಸಕ ಯು.ಟಿ ಖಾದರ್ ಗನ್ ಮ್ಯಾನ್ ಗೆ ಕೊರೊನಾ
ಮಂಗಳೂರು ಜುಲೈ 08: ಶಾಸಕ ಯು.ಟಿ.ಖಾದರ್ ಗನ್ ಮ್ಯಾನ್ ಗೆ ಕೊರೋನಾ ಸೊಂಕು ದೃಢಪಟ್ಟಿದೆ. ಮಾಜಿ ಸಚಿವ ಯು.ಟಿ ಖಾದರ್ ಜೊತೆ ಎಸ್ಕಾರ್ಟ್ ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿ ಕಳೆದ ಹತ್ತು ದಿನಗಳ ಹಿಂದೆ ಅನಾರೋಗ್ಯ ಎಂದು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಇಂದು ಅವರು ವರದಿ ಬಂದಿದ್ದು, ಕೊರೊನಾ ಸೊಂಕು ದೃಢಪಟ್ಟಿದೆ.
ಈ ಹಿನ್ನಲೆ ಎಸ್ಕಾರ್ಟ್ ವಾಹನದಲ್ಲಿದ್ದ ಉಳಿದ ಮೂವರನ್ನು ಕ್ವಾರಂಟೈನ್ ಮಾಡಲಾಗಿದೆ. ಈಗಾಗಲೇ ಶಾಸಕ ಯು.ಟಿ ಖಾದರ್ ಕೊರೊನಾ ಪರೀಕ್ಷೆ ನಡೆಸಿದ್ದು ವರದಿ ನೆಗೆಟಿವ್ ಬಂದಿದೆ.