DAKSHINA KANNADA
ಕಡಬ – ಕಾಡಾನೆ ದಾಳಿ ವ್ಯಕ್ತಿ ಗಂಭೀರ….!!

ಕಡಬ ಸೆಪ್ಟೆಂಬರ್ 29: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಮದ ಮರ್ಧಾಳ-ಕೊಣಾಜೆ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಐತ್ತೂರು ಗ್ರಾಮದ ಗರ್ತಿಲ ನಿವಾಸಿ ಓಡಿ ಎಂಬವರ ಪುತ್ರ ಕೂಲಿ ಕಾರ್ಮಿಕ ಚೋಮ (56) ಗಾಯಗೊಂಡವರು. ಅವರು ಶುಕ್ರವಾರ ಸಂಜೆ ಕೂಲಿ ಕೆಲಸ ಬಿಟ್ಟು ಮನೆಯ ಕಡೆ ತೆರಳುತ್ತಿದ್ದ ಸಂದರ್ಭ ಗ್ರಾಮದ ನೆಲ್ಯಡ್ಕ ಶಾಲೆಗೆ ಹೊಂದಿಕೊಂಡಿರುವ ಕಾರ್ತಿಕೇಯ ಭಜನಾ ಮಂದಿರದ ಬಳಿ ಆನೆ ಹಠಾತ್ತಾಗಿ ಎದುರು ಬಂದು ಇವರನ್ನು ಸೊಂಡಿಲಿನಿಂದ ಬಂದಿದೆ.

ಸದ್ಯ ಚೋಮ ಅವರ ಸ್ಥಿತಿಯು ಚಿಂತಾಜನಕವಾಗಿದ್ದು, ಕಡಬದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕಳುಹಿಸಲಾಗಿದೆ ಎಂಬುದು ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಇದೀಗ ಪದೇ ಪದೆ ಕಾಡಾನೆ ದಾಳಿಗಳು ನಡೆಯುತ್ತಿವೆ. ಕಳೆದ ಒಂದು ವರ್ಷಗಳ ಅಂತರದಲ್ಲಿ ಈ ಪ್ರದೇಶದ ಸಮೀಪದಲ್ಲಿ ಮೂವರನ್ನು ಕಾಡಾನೆ ಬಲಿ ಪಡೆದಿದ್ದು, ಮಾತ್ರವಲ್ಲದೇ ಕೆಲವರ ಮೇಲೆ ದಾಳಿಗಳು, ಕೃಷಿ ನಾಶದಂತಹ ಘಟನೆಗಳು ದಿನಂಪ್ರತಿ ನಡೆಯುತ್ತಲೇ ಇವೆ.