DAKSHINA KANNADA
ಕಡಬ : ಭಾರಿ ಗಾಳಿ ಮಳೆಗೆ ಹಾರಿಹೋದ ಸರ್ಕಾರಿ ಶಾಲೆಯ ಹೆಂಚುಗಳು, ರಜಾದಿನವಾದ ತಪ್ಪಿದ ದುರಂತ..!

ಕಡಬ : ದಕ್ಷಿಣ ಕನ್ನಡದಲ್ಲಿ ಭಾರಿ ಗಾಳಿಮಳೆಯಾಗುತ್ತಿದೆ. ಜಿಲ್ಲೆಯ ಕಡಬದಲ್ಲಿ ಬೀಸಿದ ಭಾರಿ ಗಾಳಿ-ಮಳೆಗೆ ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯ ಬಲ್ಯ ಹಿ.ಪ್ರಾ.ಶಾಲೆಯ ಕಟ್ಟಡದ ಛಾವಣಿಯ ಹೆಂಚುಗಳು ಹಾರಿ ಹೋದ ಘಟನೆ ನಡೆದಿದೆ.

ಮಳೆಯೊಂದಿಗೆ ಭಾರಿ ಗಾಳಿ ಬೀಸಿದ್ದು ಶಾಲಾ ಕಟ್ಟಡದ ಹೆಂಚುಗಳು ಗಾಳಿಗೆ ಹಾರಿ ಹೋಗಿದ್ದು, ತರಗತಿಯೊಳಗೆ ನೀರು ನಿಂತಿದೆ. ಛಾವಣಿಯನ್ನು ದುರಸ್ತಿ ಮಾಡದಿದ್ದರೆ ತರಗತಿ ನಡೆಸಲು ಅಸಾಧ್ಯವಾಗಲಿದೆ.ರಜಾ ದಿನವಾದ ಭಾನುವಾರ ಈ ಅನಾಹುತ ನಡೆದ ಕಾರಣ ಶಾಲಾ ಮಕ್ಕಳು ಶಿಕ್ಷಕರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಮಾಹಿತಿ ತಿಳಿದು ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ಕೆ, ಪಂಚಾಯತ್ ಸದಸ್ಯೆ ಮೀನಾಕ್ಷಿ ನೆಲ್ಲ, ಎಸ್ ಡಿ ಎಂ ಸಿ ಸದಸ್ಯ ಗಣೇಶ್ ಭಟ್ ದೇವರಡ್ಕ, ಮಾಜಿ ಅಧ್ಯಕ್ಷ ಪಿ.ಟಿ.ಜೋಸೆಫ್, ಉಮಾಮಹೇಶ್ವರಿ ದೇವಸ್ಥಾನದ ಕಾರ್ಯದರ್ಶಿ ನಾರಾಯಣ ಎನ್ ಕೊಲ್ಲಿಮಾರು ಬಲ್ಯ ಮತ್ತಿತರರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
https://youtu.be/4WLc56Y4DiQ
Continue Reading
Advertisement
Click to comment