DAKSHINA KANNADA
ಕಡಬ ಪೇಟೆ ಪರಿಸರದಲ್ಲಿ ಗಾಳಿ ಮಳೆಗೆ ಅಪಾರ ಹಾನಿ

ಕಡಬ ಮಾರ್ಚ್ 06: ಕಡಬ ತಾಲೂಕಿನಾದ್ಯಂತ ಶನಿವಾರ ಸಾಯಂಕಾಲ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದ್ದು. ಮಳೆಯ ಅಬ್ಬರಕ್ಕೆ ಅಪಾರ ಹಾನಿಯುಂಟಾಗಿದೆ.

ಕಡಬ-ಪಂಜ ಮುಖ್ಯ ರಸ್ತೆ , ಕೋಡಿಂಬಾಳ – ಕೋರಿಯಾರ್ ಸಂಪರ್ಕ ರಸ್ತೆಯ ಹಲವು ಕಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ರಸ್ತೆಗೆ ಮುರಿದುಬಿದ್ದ ಪರಿಣಾಮ ಕೆಲವು ತಾಸು ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಕೋಡಿಂಬಾಳ ಗ್ರಾಮದ ಕಲ್ಲಂತಡ್ಕ ವಿದ್ಯಾನಗರದ ಬಳಿ ಹಸೈನಾರ್ ಎಂಬವರ ವಾಸದ ಮನೆಗೆ ಮರಬಿದ್ದು ಹಾನಿಯಾಗಿದೆ. ಕೋಡಿಂಬಾಳದ ಉಂಡಿಲದ ದಾಮೋದರ ಅವರ ಮನೆಗೆ ಮರಬಿದ್ದು ಹಾನಿಯಾಗಿದೆ. ಕೋಡಿಂಬಾಳ ಪೇಟೆಯ ಸಾರ್ವಜನಿಕ ಬಸ್ ತಂಗುದಾಣದ ಛಾವಣಿಗೆ ಹಾಕಲಾಗಿದ್ದ ಸಿಮೆಂಟ್ ಶೀಟ್‌ಗಳು ಗಾಳಿಗೆ ಹಾರಿಹೋಗಿ ಪುಡಿಯಾಗಿದೆ.

ತಾಲೂಕಿನ ಕೊಂಬಾರು, ಸಿರಿಬಾಗಿಲು, ಕೊಯಿಲ, ರಾಮಕುಂಜ, ಹಳೆನೇರಿಂಕಿ, ಪೆರಾಬೆ, ಆಲಂಕಾರು, ಸವಣೂರು, ಕಾಣಿಯೂರು ಮೊದಲಾದ ಗ್ರಾಮಂತರ ಪ್ರದೇಶದಲ್ಲಿ ಮಳೆಯೊಂದಿಗೆ ಭಾರಿ ಗಾಳಿ ಬೀಸಿದ ಪರಿಣಾಮ ಹಾನಿಯಾಗಿದೆ. ವಿದ್ಯುತ್ ಕಂಬಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿಯೂ ವ್ಯತ್ಯಯ ಉಂಟಾಗಿದೆ. ಕಡಬ ಪೇಟೆಯಾದ್ಯಂತ ವಿವಿಧ ಕಾರ್ಯಕ್ರಮಗಳ ಪ್ರಚಾರಾರ್ಥ ಅಳವಡಿಸಲಾಗಿದ್ದ ಫ್ಲೆಕ್ಸ್ ಬ್ಯಾನರ್‌ಗಳು ಗಾಳಿಯ ರಭಸಕ್ಕೆ ನೆಲಕಚ್ಚಿದೆ.
Continue Reading