DAKSHINA KANNADA
ಹೊಸ ವರ್ಷಾಚರಣೆಗೆ ಬಂದವ ಹೆಣವಾದ!

ಮಂಗಳೂರು, ಡಿಸೆಂಬರ್ 31 : ಸಾರ್ವಜನಕರಿಗೆ ಬೀಚ್ ಗೆ ಪ್ರವೇಶ ನಿಷೇಧಿಸಿದ್ದರು, ಇಯರ್ ಎಂಡ್ ಪಾರ್ಟಿ ಮತ್ತು ಹೊಸ ವರ್ಷಾಚರಣೆಗೆಂದು ಬಂದವ ನೀರುಪಾಲಾಗಿದ್ದಾನೆ. ವರ್ಷದ ಕೊನೇ ದಿನವಾದ ಗುರುವಾರ ಮಂಗಳೂರು ಹೊರವಲಯದ ಚಿತ್ರಾಪುರ ಕಡಲತೀರದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕಡಬ ಮೂಲದ ಜಯರಾಮ್ ಗೌಡ (48) ಮೃತ. ಈತ ಸೇರಿ ಐವರ ತಂಡ ಇಯರ್ ಎಂಡ್ ಪಾರ್ಟಿ ಮಾಡಲು ಇಲ್ಲಿನ ಕೆರಿಬಿಯನ್ ಸೀ ಹೋಮ್ ರೆಸಾರ್ಟ್ಗೆ ಬಂದಿತ್ತು.

ಸಸಿಹಿತ್ಲು ಬೀಚ್ ಬಳಿ ನಿಷೇಧ ಇದ್ದ ಕಾರಣ ಚಿತ್ರಾಪು ಅಳಿವೆ ಬಾಗಿಲು ಬಳಿಯಿಂದ ಬೀಚ್ಗೆ ಹೋಗಿದ್ದರು. ನೀರಲ್ಲಿ ಆಟವಾಡುವಾಗ ಐವರೂ ಅಪಾಯಕ್ಕೆ ಸಿಲುಕಿದ್ದರು. ಅವರ ರಕ್ಷಣೆಗೆ ಧಾವಿಸಿದ ಸರ್ಫರ್ ಶ್ಯಾಮ್ ಎಂಬುವವರು ನಾಲ್ವರ ಪ್ರಾಣ ಉಳಿಸಿದರು. ಅಷ್ಟರಲ್ಲಿ ಜಯರಾಮ್ ಗೌಡ ಮೃತಪಟ್ಟಿದ್ದರು. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.