DAKSHINA KANNADA
ಕಡಬದಲ್ಲಿ ನೇಣಿಗೆ ಶರಣಾದ ಬಾರ್ ಸಪ್ಲಾಯರ್ – ಕಾರಣ ನಿಗೂಡ..!

ವ್ಯಕ್ತಿಯೊಬ್ಬರು ತನ್ನ ಮನೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಇಚ್ಲಂಪಾಡಿ ಗ್ರಾಮದಲ್ಲಿ ನಡೆದಿದೆ.
ಕಡಬ: ವ್ಯಕ್ತಿಯೊಬ್ಬರು ತನ್ನ ಮನೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಇಚ್ಲಂಪಾಡಿ ಗ್ರಾಮದಲ್ಲಿ ನಡೆದಿದೆ.

ಅಲೆಕ್ಕಿ ನಿವಾಸಿ ಬಾಲಕೃಷ್ಣ ಗೌಡ(51ವ.)ರವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ .
ಸುಮಾರು 22 ವರ್ಷ ಪುತ್ತೂರಿನ ಬಾರೊಂದರಲ್ಲಿ ಸಪ್ಲಾಯರ್ ಆಗಿ ಕೆಲಸ ಮಾಡಿದ್ದು ಇತ್ತೀಚಿನ 2 ವರ್ಷದಿಂದ ಇನ್ನೊಂದು ಬಾರ್‌ನಲ್ಲಿ ಸಪ್ಲಾಯರ್ ಆಗಿ ಕೆಲಸ ಮಾಡುತ್ತಿದ್ದರು.
ಅನಾರೋಗ್ಯದ ಹಿನ್ನೆಲೆಯಲ್ಲಿ 1 ತಿಂಗಳ ಹಿಂದೆ ಕೆಲಸಕ್ಕೆ ರಜೆಹಾಕಿ ಮನೆಗೆ ಬಂದಿದ್ದರು.
ಆ.30ರಂದು ಮಧ್ಯಾಹ್ನದ ವೇಳೆಗೆ ಬಾಲಕೃಷ್ಣ ಗೌಡರವರ ಪತ್ನಿ ಹಾಗೂ ಹಿರಿಯ ಮಗ ನೆಲ್ಯಾಡಿಗೆ ಔಷಧಿಗೆಂದು ಹೋಗಿದ್ದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯೊಳಗೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.