DAKSHINA KANNADA
ಕಡಬ: ತೋಟದ ಕೆರೆಗೆ ಬಿದ್ದ ಬೃಹತ್ ಕಾಡು ಕೋಣ

ಕಡಬ, ಡಿಸೆಂಬರ್ 13: ತಾಲೂಕಿನ ರಾಮಕುಂಜದ ಕಾರ್ಜಾಲು ಎಂಬಲ್ಲಿ ತೋಟದ ಕೆರೆಗೆ ಕಾಡುಕೋಣ ಬಿದ್ದ ಘಟನೆ ನಡೆದಿದೆ.
ರಾಮಕುಂಜದ ಕಾರ್ಜಾಲು ಎಂಬಲ್ಲಿ ಹೊನ್ನಪ್ಪ ಗೌಡ ಎನ್ನುವವರಿಗೆ ಸೇರಿದ ತೋಟದ ಕೆರೆಗೆ ಆಹಾರ ಅರಸಿ ಕೃಷಿ ತೋಟಕ್ಕೆ ಬಂದಿರುವ ಕಾಡುಕೋಣ ನಿನ್ನೆ ರಾತ್ರಿ ಬಿದ್ದಿದೆ. ಮನೆ ಮಂದಿ ಮುಂಜಾನೆ ತೋಟಕ್ಕೆ ಬಂದ ಸಮಯದಲ್ಲಿ ಕಾಡುಕೋಣ ಕೆರೆಯಲ್ಲಿರುವುದು ಪತ್ತೆಯಾಗಿದೆ.

ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ನೇತೃತ್ವದಲ್ಲಿ ಕಾಡುಕೋಣ ರಕ್ಷಣೆ ಕಾರ್ಯಾಚರಣೆ ನಡೆದಿದೆ. ಕೆರೆಯನ್ನು ಒಂದು ಬದಿಯಿಂದ ಒಡೆದು ಕಾಡುಕೋಣ ಹೊರ ಹೋಗುವಂತೆ ಗ್ರಾಮಸ್ಥರು ಮತ್ತು ಅರಣ್ಯ ಸಿಬ್ಬಂದಿ ಮಾಡಿದ್ದಾರೆ.