LATEST NEWS
ಕಾಬೂಲ್: ಮದರಸಾದ ಒಳಗೆ ಭಾರಿ ಸ್ಫೋಟ: 20 ಮಂದಿ ಸಾವು, 40ಕ್ಕೂ ಹೆಚ್ಚ ಜನರ ಸ್ಥಿತಿ ಗಂಭೀರ

ಕಾಬೂಲ್, ಆಗಸ್ಟ್ 18: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಮದರಸಾ ಒಂದರ ಒಳಗೆ ಬುಧವಾರ ಸಂಭವಿಸಿದ ಭಾರಿ ಪ್ರಮಾಣದ ಸ್ಫೋಟದಿಂದಾಗಿ 20 ಮಂದಿ ಮೃತಪಟ್ಟಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಈ ಘಟನೆ ವಾಯುವ್ಯ ಕಾಬೂಲ್ನ ಕೊತಾಲ್-ಇ- ಖೈರ್ ಖಾನಾದಲ್ಲಿ ನಡೆದಿದೆ. ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಖೈರ್ ಖಾನಾ ಪ್ರದೇಶದಲ್ಲಿ ಸಂಜೆ ಪ್ರಾರ್ಥನೆ ವೇಳೆ ಸಂಭವಿಸಿದ ಸ್ಫೋಟದಲ್ಲಿ ಮಸೀದಿಯ ಇಮಾಮ್ ಸಹ ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಕಾಬೂಲ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

ಯಾರೂ ಕೂಡ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಘಟನೆ ಬಗ್ಗೆ ಮಾತನಾಡಿರುವ ಕಾಬೂಲ್ ಸೆಕ್ಯುರಿಟಿ ಕಮ್ಯಾಂಡ್ ವಕ್ತಾರ ಖಲೀದ್ ಜದ್ರಾನ್, ಘಟನಾ ಸ್ಥಳಕ್ಕೆ ರಕ್ಷಣಾ ಪಡೆಗಳು ಆಗಮಿಸಿದ್ದು, ರಕ್ಷಣಾ ಮತ್ತು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.