ರಷ್ಯಾ ನವೆಂಬರ್ 09: ಹೆಲಿಕಾಪ್ಟರ್ ಹಿಂದಿನ ಭಾಗ ಲ್ಯಾಂಡಿಂಗ್ ವೇಳೆ ನೆಲಕ್ಕೆ ಬಡಿದ ಕಾರಣ ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್ ಗಾಳಿಯಲ್ಲಿ ಗಿರಕಿ ಹೊಡೆದು ಬಳಿಕ ಪತನಗೊಂಡ ಘಟನೆ ನವೆಂಬರ್ 7 ರಂದು ರಷ್ಯಾದ ಡಾಗೆಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ.


ಈ ಅಪಘಾತದಲ್ಲಿ ಐವರು ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ. ರಷ್ಯಾದ Ka-226 ಇದಾಗಿದ್ದು, ಎಲೆಕ್ಟ್ರೋಮೆಕಾನಿಕಲ್ ಪ್ಲ್ಯಾಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಹೆಲಿಕಾರ್ಟ್ ಇದಾಗಿದ್ದು, ಡಾಗೆಸ್ತಾನ್‌ನ ಅಚಿ-ಸು ಗ್ರಾಮದ ಬಳಿಯ ಕ್ಯಾಸ್ಪಿಯನ್ ಸಮುದ್ರ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು. ಸತ್ತವರಲ್ಲಿ ಸ್ಥಾವರದ ಉಪ ಪ್ರಧಾನ ನಿರ್ದೇಶಕ ಸೇರಿದಂತೆ ನಾಲ್ವರು KEMZ ಉದ್ಯೋಗಿಗಳು ಸೇರಿದ್ದಾರೆ. ಹೆಲಿಕಾಪ್ಟರ್‌ನ ಫ್ಲೈಟ್ ಮೆಕ್ಯಾನಿಕ್ ಕೂಡ ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.


ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ರಷ್ಯಾದ ಫೆಡರಲ್ ವಿಮಾನಯಾನ ಸಂಸ್ಥೆ ರೋಸಾವಿಯಾಟ್ಸಿಯಾ, ಅಪಘಾತವನ್ನು “ವಿಪತ್ತು” ಎಂದು ಬಣ್ಣಿಸಿದ್ದು, ಅಧಿಕೃತ ತನಿಖೆಯಲ್ಲಿ ಭಾಗವಹಿಸುವುದಾಗಿ ಹೇಳಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share Information