LATEST NEWS
ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಸಾಲು ಸಾಲು ವಿಘ್ನ – ಚಿತ್ರದ ಶೂಟಿಂಗ್ ವೇಳೆ ಸಹ ಕಲಾವಿದ ನೀರಿನಲ್ಲಿ ಮುಳುಗಿ ಸಾವು!

ಉಡುಪಿ ಮೇ 07 : ಕಾಂತಾರದ ಬಳಿಕ ಅದರ ಮುಂದುವರಿಕೆ ಭಾಗವಾಗಿ ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಸಾಲು ಸಾಲು ವಿಘ್ನಗಳು ಬರಲಾರಂಭಿಸಿದೆ. ಕಾಂತಾರ- 2 ಸೆಟ್ ನಲ್ಲಿದ್ದ ಜೂನಿಯರ್ ಆರ್ಟಿಸ್ಟ್ ನದಿಯಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ನಡೆದಿದೆ.
ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಎಂ.ಎಫ್ ಕಪಿಲ್ ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕ. ಇವರು ಇಂದು ಮಧ್ಯಾಹ್ನ ಊಟ ಮಾಡಿದ ಬಳಿಕ ಈಜಾಡಲು ನದಿಗೆ ಹಾರಿದ್ದರು. ನದಿಯ ಸುಳಿಗೆ ಸಿಲುಕಿದ ಕಪಿಲ್ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಸ್ಥಳೀಯರು ಹಾಗೂ ಪೊಲೀಸರು ಅಗ್ನಿಶಾಮಕ ದಳದ ಸಹಾಯದಿಂದ ಸಂಜೆ ಮೃತದೇಹ ಪತ್ತೆ ಹಚ್ಚಿದ್ದರು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
