Connect with us

FILM

ಮೂರನೇ ಮದುವೆಗೆ ತಯಾರಾದ ಚಿರಂಜೀವಿ ಪುತ್ರಿ…!1

ಹೈದರಬಾದ್ ಜನವರಿ 04: ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಇದೀಗ ಮೂರನೇ ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದ್ದು. ಈ ಬಗ್ಗೆ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಕುತೂಹಲ ಮೂಡಿಸಿದೆ.
ಈವರೆಗೂ ತಮ್ಮ ಖಾಸಗಿ ಬದುಕಿನ ಬಗ್ಗೆ ಏನೂ ಹೇಳಿಕೊಳ್ಳದೇ ಶ್ರೀಜಾ ಇದೀಗ ಏಕಾಏಕಿಯಾಗಿ ಇನ್ಸ್ಟಾದಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದಾರೆ. ಡಿಯರ್ 2022, ನೀನು ನನ್ನ ಜೀವನಕ್ಕೆ ಹೊಸ ವ್ಯಕ್ತಿಯನ್ನು ಪರಿಚಯ ಮಾಡಿಸಿದ್ದೀಯಾ. ಅವನ ಭೇಟಿ ನಿಜಕ್ಕೂ ಒಂದು ಅದ್ಭುತ ಪಯಣವನ್ನೇ ಆರಂಭಿಸಲಿದೆ’ ಎಂದು ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.


ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿ ಮಗಳು ಈ ಮೊದಲು ಶ್ರೀಜಾಗೆ ಸಿರೀಶ್ ಭಾರಧ್ವಜ್ ಎಂಬ ಹುಡುಗನ ಜೊತೆ ಲವ್ ಮಾಡಿ ಮದುವೆಯಾಗಿದ್ದರು.ಆದರೆ ಈ ಪ್ರೀತಿಯ ಮದುವೆ ತುಂಬಾ ದಿನ ಉಳಿಯಲಿಲ್ಲ. ಮತ್ತೆ ತವರು ಮನೆಗೆ ಬಂದ ಶ್ರೀಜಾ, ಗಂಡನು ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ 2011ರಲ್ಲಿ ಡಿವೋರ್ಸ್ ಪಡೆದುಕೊಂಡರು. ಅಲ್ಲಿಗೆ ಮೊದಲ ಮದುವೆ ಮುರಿದು ಬಿದ್ದಿತ್ತು.


ಕುಟುಂಬಸ್ಥರು ಸೇರಿ ಶ್ರೀಜಾಗೆ 2016ರಲ್ಲಿ ಉದ್ಯಮಿ ಕಲ್ಯಾಣ ದೇವ್ ಜೊತೆ ಮದುವೆ ಮಾಡಿದರು. ಅದು ಕುಟುಂಬವೇ ಸೇರಿ ಮಾಡಿದಂತಹ ಮದುವೆ ಆಗಿತ್ತು. ಆನಂತರ ಇಬ್ಬರಲ್ಲೂ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿತ್ತು. ಅದಕ್ಕೆ ಪೂರಕ ಎನ್ನುವಂತೆ ಶ್ರೀಜಾ ತಮ್ಮ ಪತಿಯ ಹೆಸರನ್ನು ಸೋಷಿಯಲ್ ಮೀಡಿಯಾದಿಂದ ಕಿತ್ತು ಹಾಕಿದರು. ಅವರನ್ನು ಅನ್ ಫಾಲೋ ಮಾಡಿದರು. ಈ ಮಧ್ಯ ಕಲ್ಯಾಣ್ ದೇವ್ ಕೂಡ ತಮ್ಮ ಬದುಕು ಕಠಿಣ ಅನಿಸುತ್ತಿದೆ ಎಂದು ಬರೆದುಕೊಂಡಿದ್ದರು. ಇಬ್ಬರೂ ದೂರವಾಗಿದ್ದಾರಾ ಅಥವಾ ಡಿವೋರ್ಸ್ ಪಡೆದಿದ್ದಾರಾ ಎನ್ನುವ ಕುರಿತು ಮಾಹಿತಿ ಇಲ್ಲ.

ಇಷ್ಟರಲ್ಲಿ ಶ್ರೀಜಾ ಮತ್ತೆ ಪೋಸ್ಟ್ ಮಾಡಿ ತಮ್ಮ ಜೀವನಕ್ಕೆ ಮತ್ತೋರ್ವ ವ್ಯಕ್ತಿ ಎಂಟ್ರಿ ಪಡೆದಿರುವ ಹಾಗೂ ಅವನೊಂದಿಗೆ ಹೊಸ ಜೀವನ ನಡೆಸುವ ಕುರಿತು ಸುಳಿವು ನೀಡಿದ್ದಾರೆ. ಆದರೆ, ಈ ಬರಹ ತೆಲುಗು ಸಿನಿಮಾ ರಂಗದಲ್ಲಿ ಭಾರೀ ಸಂಚಲನವನ್ನಂತೂ ಮೂಡಿಸಿದೆ. ಶ್ರೀಜಾ ಹಾಕಿರುವ ಈ ಪೋಸ್ಟ್ ಹಿಂದಿನ ಅರ್ಥವನ್ನು ಕೆದುಕುವ ಪ್ರಯತ್ನವನ್ನು ಮಾಡಲಾಗುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *