BELTHANGADI
ಬೆಳ್ತಂಗಡಿ – ಪ್ರಕರಣದ ತನಿಖೆಗೆ ಬಂದ ಮೂಡಬಿದಿರೆ ಪೊಲೀಸರನ್ನ ನಕ್ಸಲ್ ಎಂದ ಜೋಸಿ ಅಂಟೋನಿ

ಬೆಳ್ತಂಗಡಿ ನವೆಂಬರ್ 22: ಪ್ರಕರಣವೊಂದರ ತನಿಖೆಗೆ ಆಗಮಿಸಿದ ಪೋಲೀಸರಿಗೆ ನಕ್ಸಲ್ ಹಣೆಪಟ್ಟಿ, ಪೊಲೀಸ್ ಕಂಟ್ರೋಲ್ ರೂಂಗೆ ತಿಳಿಸಿ ಎರಡು ಕಡೆಯ ಪೊಲೀಸರು ವ್ಯಕ್ತಿಯ ಮನೆಗೆ ಬಂದ ಘಟನೆ ಬೆಳ್ತಂಗಡಿ ತಾಲೂಕಿನ ನಾರಾವಿಯ ಕುತ್ಲೂರು ಎಂಬಲ್ಲಿ ನಡೆದಿದೆ.
ನಾರಾವಿಯ ಕುತ್ಲೂರು ನಿವಾಸಿ ಜೋಸಿ ಆಂಟೋನಿ ಎಂಬಾತನಿಂದ ಈ ಗೊಂದಲವುಂಟಾಗಿದೆ. ಮೂಡಬಿದಿರೆ ಪೋಲೀಸ್ ಠಾಣೆಯಲ್ಲಿ ಜೋಸಿ ಅಂಟೋನಿ ವಿರುದ್ಧ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ವಂಚನೆ ಪ್ರಕರಣ ದಾಖಲಾಗಿತ್ತು, ಬೆಂಗಳೂರು ನಿವಾಸಿ ಶರತ್ ಕುಮಾರ್ ಎಂಬವರಿಗೆ ಜಮೀನು ಮಾರಾಟ ಮಾಡುವ ವಿಚಾರದಲ್ಲಿ ವಂಚನೆ ಮಾಡಿದ್ದಾರೆ ಎಂದು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ವಿಚಾರವಾಗಿ ಮೂಡುಬಿದಿರೆ ಪೊಲೀಸರು ನಿನ್ನೆ ರಾತ್ರಿ 9.30 ಗಂಟೆಗೆ ಜೋಸಿ ಮನೆಗೆ ಹೋಗಿದ್ದರು. ಈ ವೇಳೆ ಪೋಲೀಸರನ್ನ ಕಂಡ ಜೋಸಿ ಅಂಟೋನಿ ಮನೆ ಬಾಗಿಲು ತೆರೆಯದೆ ಮನೆ ಒಳಗಿಂದ ಕಂಟ್ರೋಲ್ ರೂಂ ಗೆ ಫೋನ್ ಮಾಡಿ ಮನೆಗೆ ನಕ್ಸಲ್ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ನಕ್ಸಲ್ ವಿಚಾರವಾಗಿ ಪೊನ್ ಕಾಲ್ ಬರುತ್ತಲೇ ಜಾಗೃತಗೊಂಡ ವೇಣೂರು ಮತ್ತು ಬೆಳ್ತಂಗಡಿ ಪೊಲೀಸರು ಜೋಸಿ ಮನೆಗೆ ದೌಡಾಯಿಸಿದ್ದಾರೆ. ಆದರೆ ಮನೆಗೆ ಬಂದು ನೋಡಿದರೆ ವಿಚಾರಣೆ ವೇಳೆಗೆ ಮನೆಗೆ ಬಂದಿರೋರು ಮೂಡುಬಿದಿರೆ ಪೋಲೀಸರು ಎನ್ನುವ ವಿಚಾರ ಬಯಲಾಗಿದೆ.
ಸ್ಥಳೀಯರಿಗೂ ನಕ್ಸಲ್ ಬಂದಿರೋದು ಎಂದು ಸುಳ್ಳು ಹೇಳಿದ್ದ ಜೋಸಿ, ಜೋಸಿ ಆಂಟೋನಿ ಹುಚ್ಚಾಟಕ್ಕೆ ಪೊಲೀಸರು ಹಾಗೂ ನಾಗರೀಕರು ಕೆಲಕಾಲ ಆತಂಕಗೊಂಡಿದ್ದರು. ಇತ್ತೀಚೆಗಷ್ಟೇ ಕರ್ನಾಟಕ ಕೇರಳ ಗಡಿಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಹೆಚ್ಚಾಗಿದ್ದು, ಇದರಿಂದಾಗಿ ಕರ್ನಾಟಕ ಪೊಲೀಸರು ಹೈಅಲರ್ಟ್ ಆಗಿದ್ದಾರೆ.