FILM
ತಮ್ಮ ಮೊದಲ ಚಿತ್ರ ಬಿಡುಗಡೆ ಸಂದರ್ಭದಲ್ಲೇ ಸಾವನಪ್ಪಿದ ಯುವ ನಿರ್ದೇಶಕ
ತಿರುವನಂತಪುರಂ ಫೆಬ್ರವರಿ 27: ತಾನು ನಿರ್ದೇಶಿಸಿದ ಚಿತ್ರ ಬಿಡುಗಡೆಯಾಗುವ ಹೊತ್ತಲ್ಲೇ ಮಲಯಾಳಂ ಯುವ ನಿರ್ದೇಶಕ ಜೊಸೆಫ್ ಮನು ಜೇಮ್ಸ್ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಕೇವಲ 31 ವರ್ಷ ವಯಸ್ಸಾಗಿತ್ತು. ಹೆಪಟೈಟಿಸ್‌ನಿಂದ ಬಳಲುತ್ತಿದ್ದ ಅವರು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಫೆಬ್ರುವರಿ 24ರಂದು ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಜೊಸೆಫ್ ಮನು ಬಾಲ ನಟರಾಗಿ ಮಲಯಾಳಂ ಸಿನಿಮಾರಂಗಕ್ಕೆ ಪ್ರವೇಶ ಮಾಡಿದ್ದರು. ನಂತರ ಕೆಲವು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಸಹಾಯಕ ನಿರ್ದೇಶಕಾಗಿ ಕೆಲಸ ಮಾಡಿದ್ದರು. ಜೊಸೆಫ್ ಮನು ನಿರ್ದೇಶನದ ಮೊದಲ ಸಿನಿಮಾ ‘ನಾನ್ಸಿ ರಾಣಿ’ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೆ ಸಿದ್ಧವಾಗಿತ್ತು.