LATEST NEWS
ಜ್ಯುವೆಲ್ಲರಿಯಲ್ಲಿ ಉಂಗುರ ಕದ್ದು ಸಿಕ್ಕಿ ಬಿದ್ದ ಕಳ್ಳ….!!

ಉಡುಪಿ ಅಕ್ಟೋಬರ್ 11 : ಜ್ಯುವೆಲ್ಲರಿಗೆ ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳನೊಬ್ಬ ಉಂಗುರು ಕದಿಯುವಾಗಿ ಸಿಕ್ಕಿಬಿದ್ದ ಘಟನೆ ಉಡುಪಿ ನಗರದ ಕೆನರಾ ಜ್ಯುವೆಲ್ಲರಿಯಲ್ಲಿ ನಡೆದಿದೆ. ಸದ್ಯ ಕಳ್ಳ ಕಾಸರಗೋಡು ನಿವಾಸಿ ಸಾಜು ಪೊಲೀಸ್ ಅತಿಥಿಯಾಗಿದ್ದಾನೆ.
ಈತ ನಗರದ ಕೆನರಾ ಜ್ಯುವೆಲ್ಲರಿಗೆ ಗ್ರಾಹಕನ ಸೋಗಿನಲ್ಲಿ ತೆರಳಿ ಉಂಗುರ ಬೇಕು ಎಂದು ಕೇಳಿದ್ದಾನೆ.ಅದನ್ನು ತೋರಿಸುವಾಗ ಚೈನ್ ತೋರಿಸಿ ಎಂದಿದ್ದಾನೆ. ಜ್ಯುವೆಲ್ಲರಿಯವರು ಚೈನ್ ತೋರಿಸುವಾಗ ಈತ ಉಂಗುರ ಹಿಡಿದುಕೊಂಡು ಓಡಿದ್ದಾನೆ. ಜ್ಯುವೆಲ್ಲರಿಯ ಮಾಲಕ ಸ್ಥಳೀಯರ ನೆರವಿನಿಂದ ಕಳ್ಳನನ್ನು ಬೆನ್ನಟ್ಟಿ ಹಿಡಿದು ಅವನಿಂದ ಉಂಗುರ ವಾಪಾಸು ಪಡೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.
