Connect with us

DAKSHINA KANNADA

ಜ್ಯುವೆಲ್ಲರಿ ದರೋಡೆ ಪ್ರಕರಣ : ಮೂವರು ಆರೋಪಿಗಳನ್ನು ಬಂಧಿಸಿದ ಮಂಗಳೂರು ಪೊಲೀಸರು..! 

ಮಂಗಳೂರು : ‌ನಗರದ ಜ್ಯುವೆಲ್ಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಗಮನ ಬೇರೆಡೆ ಸೆಳೆದು ಸುಮಾರು 6 ಲ.ರೂ. ಮೌಲ್ಯದ 97.11 ಗ್ರಾಂ ಚಿನ್ನ ಎಗರಿಸಿದ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ .

ಉಳ್ಳಾಲ ಮಂಜನಾಡಿಯ ಮಹಮ್ಮದ್‌ ಸಿನಾನ್‌ (25) ಮತ್ತು ಹೈದರ್‌ಆಲಿ ಆಸಿಲ್‌(20) ಹಾಗೂ ನಾಟೇಕಲ್‌ನ ಮೊಹಮ್ಮದ್‌ ತನ್ವೀರ್‌( 34 ) ಬಂಧಿತ ಆರೋಪಿಗಳು.ಆರೋಪಿಗಳು ಜ. 3ರಂದು ಚಿನ್ನ ಲಪಟಾಯಿಸಿದ ಬಗ್ಗೆ ಮಂಗಳೂರು ಉತ್ತರ ಠಾಣೆಗೆ ದೂರು ನೀಡಲಾಗಿತ್ತು.ಆರೋಪಿಗಳಿಂದ 6 ಲ.ರೂ. ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ ಸ್ಕೂಟರ್‌, 2 ಮೊಬೈಲ್‌ ಫೋನ್‌ಗಳು ಸಹಿತ ಒಟ್ಟು 7.15 ಲ.ರೂ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪೈಕಿ ಮೊಹಮ್ಮದ್‌ ತನ್ವೀರ್‌ನ ವಿರುದ್ದ ಈ ಹಿಂದೆ ಕೋಣಾಜೆ ಪೊಲೀಸ್‌ ಠಾಣೆಯಲ್ಲಿ ದರೋಡೆ ಪ್ರಕರಣ ಹಾಗೂ ಹೈದರ್‌ಆಲಿ ಆಸಿಲ್‌ ನ ವಿರುದ್ಧ ಕೋಣಾಜೆ ಪೊಲೀಸ್‌ ಠಾಣೆಯಲ್ಲಿ 2 ಹಲ್ಲೆ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಹೇಳಿಕೆ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *