DAKSHINA KANNADA
ಹಂಪನಕಟ್ಟೆ -ಹಾಡುಹಗಲೇ ಜ್ಯುವೆಲ್ಲರಿ ಸಿಬ್ಬಂದಿಯ ಕೊಲೆ

ಮಂಗಳೂರು ಫೆಬ್ರವರಿ 03: ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿಗೆ ಚೂರಿ ಇರಿದ ಕೊಲೆ ಮಾಡಿರುವ ಘಟನೆ ನಗರದ ಹಂಪನಕಟ್ಟೆ ಮಿಲಾಗ್ರಿಸ್ ಸಮೀಪ ನಡೆದಿದೆ. ಕೊಲೆಯಾದವರನ್ನು ಜುವೆಲ್ಲರಿ ಉದ್ಯೋಗಿ, ಅತ್ತಾವರ ನಿವಾಸಿ ರಾಘವೇಂದ್ರ (52) ಕೊಲೆಯಾದ ವ್ಯಕ್ತಿ.
ಮಧ್ಯಾಹ್ನ ಮುಸುಕು ಹಾಕಿಕೊಂಡು ಬಂದಿದ್ದ ವ್ಯಕ್ತಿ ಕೃತ್ಯ ಎಸಗಿದ್ದಾನೆ. ಜುವೆಲ್ಲರಿ ಮಾಲಕ ಊಟಕ್ಕೆಂದು ತೆರಳಿದ್ದಾಗ ಆಗಂತುಕ ಒಳಗೆ ಬಂದಿದ್ದ. ಮಾಲಕ ಬರುವಷ್ಟರಲ್ಲಿ ಚೂರಿ ಇರಿದು ಪರಾರಿಯಾಗಿದ್ದ. ಮುಸುಕು ಹಾಕಿದ್ದ ಎನ್ನಲಾಗುತ್ತಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಘವೇಂದ್ರ ಅವರನ್ನು ಕೂಡಲೇ ವೆನ್ಲಾಕ್ ಆಸ್ಪತ್ರೆಗೆ ಒಯ್ಯಲಾಗಿತ್ತು. ಅಲ್ಲಿ ರಾಘವೇಂದ್ರ ಸಾವನ್ನಪ್ಪಿದ್ದಾರೆ. ಯಾವ ಕಾರಣಕ್ಕೆ ಕೃತ್ಯ ಎಸಗಿದ್ದಾನೆಂದು ತಿಳಿದು ಬಂದಿಲ್ಲ.