LATEST NEWS
ದಕ್ಷಿಣಕೊರಿಯಾ – ಲ್ಯಾಂಡಿಂಗ್ ವೇಳೆ ತಡೆಗೊಡೆಗೆ ಗುದ್ದಿದ ವಿಮಾನ 85ಕ್ಕೂ ಅಧಿಕ ಸಾವು
ದಕ್ಷಿಣ ಕೊರಿಯಾ ಡಿಸೆಂಬರ್ 29: ಪ್ಯಾಸೆಂಜರ್ ವಿಮಾನವೊಂದು ರನ್ ವೇ ನಿಂದ ಸ್ಕಿಡ್ ಆಗಿ ತಡೆಗೊಡಗೆ ಡಿಕ್ಕಿ ಹೊಡೆದ ಪರಿೀಣಾ್ಮ 85ಕ್ಕೂ ಅಧಿಕ ಮಂದಿ ಸಾವನಪ್ಪಿದ ಘಟನೆ ದಕ್ಷಿಣಕೊರಿಯಾದಲ್ಲಿ ನಡೆದಿದೆ.
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ಬಂದಿದ್ದ ವಿಮಾನವು, ನಿಲ್ದಾಣದಲ್ಲಿ ಇಳಿಯುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕೀಡಾದ ವಿಮಾನ ‘ಜೆಜು ಏರ್’ ವಿಮಾನಯಾನ ಸಂಸ್ಥೆಯದ್ದು. ಅದರಲ್ಲಿ 6 ಸಿಬ್ಬಂದಿ, 175 ಮಂದಿ ಪ್ರಯಾಣಿಕರಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಬದುಕುಳಿದಿದ್ದ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಆದರೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಮಾನವು ಗೋಡೆಗೆ ಡಿಕ್ಕಿಯಾಗುತ್ತಿದ್ದಂತೆ, ಬೆಂಕಿ ಹೊತ್ತಿಕೊಳ್ಳುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
TRAGIC UPDATE: Jeju Air Flight 2216 crash in South Korea.
47 lives lost
2 survivors
132 still missing
A devastating moment for families and the world. Thoughts and prayers go out to everyone affected. ️ #JejuAir #SouthKorea #FlightCrash pic.twitter.com/QnT29zVTs8— Dilojan (@umadilojan) December 29, 2024