DAKSHINA KANNADA
ಐಟಿ ಕಚೇರಿಯಲ್ಲಿ ದಾಂಧಲೆ : ಕ್ರಮಕ್ಕೆ ದ ಕ ಯುವ ಜೆಡಿಎಸ್ ಆಗ್ರಹ
ಮಂಗಳೂರು,ಆಗಸ್ಟ್.03 : ಮಂಗಳೂರು ಆದಾಯ ತೆರಿಗೆ ಕಚೇರಿಯಲ್ಲಿ ದಾಂಧಲೆ ನಡೆಸಿ ಕಲ್ಲು ತೂರಾಟ ನಡೆಸಿದ ದ ಕ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ (ಜಾತ್ಯಾತೀತ) ಪೋಲಿಸ್ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಜನತಾ ದಳ ಅಧ್ಯಕ್ಷ ಅಕ್ಷಿತ್ ಸುವರ್ಣ ಅವರು ರಾಜ್ಯದಲ್ಲಿ ಇಂಧನ ಸಚಿವರ ಮನೆ ಹಾಗೂ ಅವರ ಕಚೇರಿಗಳು ಮತ್ತು ಅವರ ಆಪ್ತರ ಮನೆ ಹಾಗೂ ಕಛೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳೂ ದಾಳಿಯನ್ನು ಖಂಡಿಸ ದಕ ಕಾಂಗ್ರೆಸ್ ಮುಖಂಡರು ಮಂಗಳೂರು ನಗರದ ಆದಾಯ ತೆರಿಗೆ ಕಚೇರಿಗೆ ಕಲ್ಲು ತೂರಾಟ ಮಾಡಿರುವುದನ್ನ ಜಿಲ್ಲಾ ಯುವ ಜನತಾದಳ ಖಂಡಿಸುತ್ತದೆ. ಪ್ರತಿಭಟನೆಯ ನೇತೃತ್ವವನ್ನು ವಹಿಸಿದ ಸ್ಥಳೀಯ ಕಾರ್ಪೊರೇಟರ್ ವಿನಯ್ ರಾಜ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದುಕೊಂಡು ಅಂತಹ ಕಾನೂನು ಉಲ್ಲಂಘಟನೆಯ ಕೆಲಸಕ್ಕೆ ಬೆಂಬಲ ನೀಡಿರುವುದು ಖಂಡನೀಯವಾಗಿದೆ.ಕಲ್ಲು ತೂರಾಟ ಮಾಡಿರುವುದು ಅಸಭ್ಯ, ಅನೈತಿಕ, ಅನಾಗರಿಕ, ಅಸಂಬದ್ಧವಾದ ಘಟನೆ ಮತ್ತು ಇಂತಹಾ ಗೂಂಡಾಗಿರಿಯನ್ನು ಮಟ್ಟ ಹಾಕಬೇಕು. ಇಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಾಮರಸ್ಯ ಕೆಡಲು ಸಾಧ್ಯವಿದೆ. ಆದ್ದರಿಂದ ಕಲ್ಲು ತೂರಾಟ ನಡೆಸಿದವರನ್ನು ಮಾಧ್ಯಮಗಳ ವೀಡಿಯೋ ಆಧಾರದಲ್ಲಿ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ನಾಯಕರುಗಳಾದ ಶ್ರೀನಾಥ್ ರೈ, ಜಿಲ್ಲಾ ಯುವ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಗೌಡ, ಜಿಲ್ಲಾ ಯುವ ಕಾರ್ಯದರ್ಶಿಗಳಾದ ದೀಪಕ್, ಲಿಖಿತ್ ರಾಜ್, ಪೈಝಲ್, ಜಿಲ್ಲಾ ಮುಖಂಡರುಗಳಾದ ಸಿನಾನ್, ತೇಜಸ್ ನಾಯಕ್, ಹಾಝಿಕ್, ಹಿತೇಶ್ ರೈ ಹಾಗೂ ಇತರರು ಉಪಸ್ಥಿತರಿದ್ದರು.