LATEST NEWS
ಖಾದರ್ ತಂತ್ರಕ್ಕೆ ತಿರುಮಂತ್ರ ರೂಪಿಸಿದ ಜೆಡಿಎಸ್ ಮುಖಂಡ ಬಿ.ಎಂ ಫಾರೂಕ್
ಖಾದರ್ ತಂತ್ರಕ್ಕೆ ತಿರುಮಂತ್ರ ರೂಪಿಸಿದ ಜೆಡಿಎಸ್ ಮುಖಂಡ ಬಿ.ಎಂ ಫಾರೂಕ್
ಮಂಗಳೂರು ಎಪ್ರಿಲ್ 22: ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಯು.ಟಿ ಖಾದರ್ ಗೆ ತಿರುಮಂತ್ರ ಹಾಕಿದ ಬಿ.ಎಂ ಫಾರೂಕ್ . ಮಂಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅಶ್ರಫ್ ಕಣಕ್ಕಿಳಿಯದಂತೆ ಒತ್ತಡ ತಂತ್ರಗಾರಿಕೆ ರೂಪಿಸಿದ್ದ ಖಾದರ್ ಗೆ ಹಿನ್ನಡೆಯಾಗಿದೆ.
ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ತನ್ನ ಅಭ್ಯರ್ಥಿಯಾಗಿ ಅಶ್ರಫ್ ಕೊನೆಗೂ ಕಣಕ್ಕಿಳಿಸಿದೆ.ಮಾಜಿ ಮೇಯರ್ ಅಶ್ರಫ್ ಕೊನೆಗೂ ಜೆಡಿಎಸ್ ಬಿ ಫಾರಂ ಪಡೆಯಲು ಸಫಲರಾಗಿದ್ದಾರೆ. ಮಂಗಳೂರು ಕ್ಷೇತ್ರದಿಂದ ತನ್ನ ಅಭ್ಯರ್ಥಿಯಾಗಿ ಅಶ್ರಫ್ ಅವರನ್ನ ಕಣಕ್ಕಿಳಿಸಲು ಜೆಡಿಎಸ್ ಈ ಹಿಂದೆ ತೀರ್ಮಾನಿಸಿತ್ತು.
ಆದರೆ ಅಶ್ರಫ್ ಅವರಿಗೆ ಟಿಕೆಟ್ ನೀಡದಂತೆ ಖಾದರ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ ಫಾರೂಕ್ ಅವರ ಮೇಲೆ ತೀವ್ರ ಒತ್ತಡ ತಂದಿದ್ದರು ಎಂದು ಹೇಳಲಾಗಿದೆ. ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಹಾಗೂ ಬಿ.ಎಂ ಫಾರೂಕ್ ಅವರ ಸಹೋದರ ಮೊಯಿದ್ದಿನ್ ಬಾವಾ ಅವರ ಸೋಲು ಗೆಲುವಿನ ತಂತ್ರಗಾರಿಕೆ ಒತ್ತಡವನ್ನು ಯು.ಟಿ ಖಾದರ್ ಅನುಸರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಆದರೆ ಖಾದರ್ ಅವರ ತಂತ್ರಗಾರಿಕೆಗೆ ಬಿ.ಎಂ ಫಾರೂಕ್ ತಿರುಮಂತ್ರ ಹೇಳಿದ್ದು, ಕೊನೆ ಕ್ಷಣದಲ್ಲಿ ಅಶ್ರಫ್ ಅವರಿಗೆ ಬಿ ಫಾರಂ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಯು.ಟಿ ಖಾದರ್ ಗೆಲುವಿಗೆ ಅಶ್ರಫ್ ತಡೆಯೊಡ್ಡಲಿದ್ದಾರೆ ಎಂದು ವಿಮರ್ಶಿಸಲಾಗಿತ್ತು.