FILM
ವಿವಾಹಿತ ವ್ಯಕ್ತಿ ಜೊತೆ ಎರಡು ವರ್ಷ ರಿಲೇಶನ್ಶಿಪ್ – ಜಯಶ್ರಿ ಆರಾಧ್ಯ

ಬೆಂಗಳೂರು – ಕಲ್ಲರ್ಸ್ ಕನ್ನಡ ನಡೆಸಿಕೊಡುತ್ತಿರುವ ಬಿಗ್ ಬಾಸ್ ಓಟಿಟಿ ಈಗ ಭಾರೀ ಚರ್ಚೆಯನ್ನೇ ಹುಟ್ಟುಹಾಕಿದ್ದು, ಭಿನ್ನ ಭಿನ್ನ ಅಭಿರುಚಿ 16 ಮಂದಿ ಸ್ಪರ್ಧಿಗಳು ಇರುವ ಬಿಗ್ ಬಾಸ್ ಮನೆ ಇದೀಗ ಸುದ್ದಿಯಲ್ಲಿದೆ.
ಈ ನಡುವೆ ಮಾರಿಮುತ್ತು ಖ್ಯಾತಿಯ ನಟಿ ಸರೋಜಾ ಅವರ ಮೊಮ್ಮಗಳು ಜಯಶ್ರಿ ಆರಾಧ್ಯ ಎಲ್ಲರ ಗಮನ ಸೆಳೆದಿದ್ದಾರೆ. ನಟಿಯಾಗಿ ಉದ್ಯಮದಲ್ಲಿ ಯಶಸ್ವಿಯಾಗಿರುವ ಅವರು ಈಗ ಬಿಗ್ ಬಾಸ್ ನಲ್ಲಿ ತಮ್ಮ ಜೀವನದ ಕಹಿ ಘಟನೆಯನ್ನು ಹೊರಹಾಕಿದ್ದಾರೆ.
ಜಯಶ್ರೀ ಅವರು ತಮ್ಮ ಜೀವನದಲ್ಲಿ ಆದ ಘಟನೆ ಬಗ್ಗೆ ಬಿಗ್ ಬಾಸ್ ನಲ್ಲಿ ಹೇಳಿಕೊಂಡಿದ್ದು, ವಿವಾಹಿತ ವ್ಯಕ್ತಿಯ ಜತೆ ನಾನು ಎರಡು ವರ್ಷ ರಿಲೇಶನ್ಶಿಪ್ನಲ್ಲಿದ್ದೆ. ನಾನು ದುಡ್ಡಿಗೋಸ್ಕರ ಅವರ ಜತೆ ಇರಲಿಲ್ಲ. ಅವರಿಗೆ ನನ್ನ ಬೆಂಬಲ ಬೇಕಿತ್ತು, ನನಗೆ ಅವರ ಬೆಂಬಲ ಬೇಕಿತ್ತು. ಅದಕ್ಕಾಗಿ ಅವರ ಜತೆ ರಿಲೇಶನ್ಶಿಪ್ನಲ್ಲಿದ್ದೆ’ ಎಂದಿದ್ದಾರೆ ಜಯಶ್ರೀ.

ನಾನು ಅವರಿಂದ ಜೂಜು ಕಲಿತೆ. ಒಂದೂವರೆ ವರ್ಷಗಳ ಕಾಲ ಜೂಜು ಆಡಿದೆ. ಆಮೇಲೆ ಜೂಜು ಬಿಟ್ಟೆ. ಅವರಿಗೂ ಜೂಜು ಬಿಟ್ಟುಬಿಡಿ ಎಂದೆ. ನನ್ನ ಮೇಲೆ ನನಗೆ ಅಸಹ್ಯ ಹುಟ್ಟಿತು. ಅವರಿಗೆ ಕ್ಯಾನ್ಸರ್ ಬಂತು. ಆದರೂ ನಾನು ಅವರನ್ನು ಬಿಡಲಿಲ್ಲ. ನಂತರ ನಾನು ಬಿಸ್ನೆಸ್ ಶುರು ಮಾಡಿದೆ. ನಾನು ಅವರನ್ನು ಏಕೆ ಬಿಡಲಿಲ್ಲ ಎಂದರೆ ಅವರು ತುಂಬಾನೇ ಕಷ್ಟದಲ್ಲಿದ್ದರು ಎಂದಿದ್ದಾರೆ ಜಯಶ್ರೀ.