Connect with us

    FILM

    ತಮಿಳು ಸಿನೆಮಾರಂಗದಲ್ಲಿ ಮತ್ತೊಂದು ಡೈವೋರ್ಸ್ – ತಮಿಳು ನಟ ಜಯಂ ರವಿ ವಿಚ್ಚೇದನ….?

    ಚೆನ್ನೈ ಜೂನ್ 26: ಚಿತ್ರರಂಗದಲ್ಲಿ ಇದೀಗ ಡೈವೋರ್ಸ್ ಸುದ್ದಿಗಳೇ ಹೆಚ್ಚಾಗಿ ಕೇಳಿ ಬರುತ್ತಿದೆ. ಕನ್ನಡ ಸಿನೆಮಾರಂಗದ ಬಳಿಕ ಇದೀಗ ತಮಿಳು ಚಿತ್ರರಂಗದಲ್ಲೂ ಡೈವೋರ್ಸ್ ಸುದ್ದಿ ಹೆಚ್ಚಾಗಿದೆ. ತಮಿಳಿನ ಖ್ಯಾತ ನಟ ಜಯಂರವಿ ವಿಚ್ಚೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.


    ನಟ ಜಯಂರವಿ ಆರತಿ ಎಂಬವರನ್ನು ಮದುವೆಯಾಗಿ 15 ವರ್ಷಗಳಾಗಿದೆ. ಇಬ್ಬರು ಗಂಡು ಮಕ್ಕಳಿದ್ದಾರೆ. ಈ ನಡುವೆ ಆರತಿ ಅವರು ತಮ್ಮ ಸಾಮಾಜಿಕ ಜಾಲತಾಣದಿಂದ ಜಯಂ ರವಿ ಅವರ ಎಲ್ಲಾ ಪೋಟೋಗಳನ್ನು ತೆಗೆದು ಹಾಕಿದ್ದಾರೆ. ಅವರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ವದಂತಿಗಳನ್ನು ಹುಟ್ಟುಹಾಕಿದೆ.

    2009ರಲ್ಲಿ ಜಯಂ ರವಿ, ಆರತಿಯನ್ನು ವಿವಾಹವಾಗಿದ್ದರು. ಬಳಿಕ ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಜನಿಸಿದ್ದರು. ಮಕ್ಕಳು ಯಾರ ಜೊತೆ ಇದ್ದಾರೆ ಎಂಬುವುದು ತಿಳಿದಿಲ್ಲ. ಇಲ್ಲಿಗೆ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 15 ವರ್ಷ ಕಳೆಯುತ್ತ ಬರುತ್ತಿದೆ. ಇಷ್ಟು ವರ್ಷ ಕಾಲ ಪರಸ್ಪರ ಆತ್ಮೀಯರಾಗಿದ್ದ ಈ ಜೋಡಿ ಇದೀಗ ದಿಢೀರ್ ಅಗಲಿಕೆಯ ಸುದ್ದಿ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಕಾಲಿವುಡ್​ನಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಜಯಂ ರವಿ ಹಾಗೂ ಪತ್ನಿ ಆರತಿ ನಡುವೆ ಕೆಲ ವರ್ಷಗಳಿಂದ ಭಿನ್ನಾಭಿಪ್ರಾಯವಿದೆ. ಹೀಗಾಗಿ ಒಬ್ಬರನ್ನೊಬ್ಬರು ಇಷ್ಟಪಡುತ್ತಿಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಆರತಿ ತನ್ನ ಇನ್​ಸ್ಟಾದಲ್ಲಿ ಗಂಡನ ಎಲ್ಲ ಫೋಟೋಗಳನ್ನು ತೆಗೆದು ಹಾಕಿದ್ದಾರೆ. ಆದರೆ ಈ ಬಗ್ಗೆ ಜಯಂ ರವಿ ಎಲ್ಲಿಯು ಅಧಿಕೃತವಾಗಿ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *