LATEST NEWS
13 ಕೋಟಿ ಆಸ್ತಿಯ ಒಡೆಯ ಕಾಂಗ್ರೇಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ

ಉಡುಪಿ ಎಪ್ರಿಲ್ 04 : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ತಮ್ಮ ಆಸ್ತಿ ವಿವರದ ಅಫಿಡವಿಟ್ ಸಲ್ಲಿಸಿದ್ದು ಅದರ ಪ್ರಕಾರ ಜಯಪ್ರಕಾಶ್ ಹೆಗ್ಡೆ 13 ಕೋಟಿ ಆಸ್ತಿಯ ಒಡೆಯ.
ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು 35,34,326 ರು.ಗಳ ಚರಾಸ್ತಿ ಮತ್ತು 13,13,61,587 ರು.ಗಳ ಸೇರಿ ಒಟ್ಟು 13,48,95,913 ರು. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಹಾಗೆಯೇ 15,00,000 5. ಇದೆ. ಬೆಂಗಳೂರಿನಲ್ಲಿ ಮನೆ ಮತ್ತು ಭೂಮಿಯನ್ನು ಹೊಂದಿದ್ದಾರೆ. ಅವರ ಪತ್ನಿ 81,46,544 ರು. ಮೌಲ್ಯದ ಚರಾಸ್ತಿ, 1,05,00,180 2. ಹೊಂದಿದ್ದಾರೆ. ಅವರ ಬಳಿ 64 ಲಕ್ಷ ರು. ಮೌಲ್ಯದ ಚಿನ್ನಾಭರಣಗಳಿವೆ.
