Connect with us

    LATEST NEWS

    ಪ್ರೀತಿಸಿದ ಹುಡುಗನಿಗಾಗಿ ತನ್ನ ರಾಜಮನೆತನ ಸ್ಥಾನಮಾನಗಳನ್ನು ಕಳೆದುಕೊಂಡ ಜಪಾನ್ ರಾಜಕುಮಾರಿ

    ಟೋಕಿಯೊ : ಸಾಮಾನ್ಯ ವ್ಯಕ್ತಿಯೊಬ್ಬನನ್ನು ಮದುವೆಯಾಗುವ ಮೂಲಕ ಜಪಾನ್ ನ ರಾಜಕುಮಾರಿ ಮಾಕೊ ಅವರು ತಮ್ಮ ರಾಜಮನೆತನದ ಸ್ಥಾನಮಾನಗಳನ್ನು ಕಳೆದುಕೊಂಡಿದ್ದಾರೆ.


    ಜಪಾನ್ ನ 30ರ ವಯಸ್ಸಿನ ಮಾಕೊ, ಚಕ್ರವರ್ತಿ ನರುಹಿಟೊ ಅವರ ಸೊಸೆ. ಟೋಕಿಯೊದ ಇಂಟರ್‌ನ್ಯಾಷನಲ್‌ ಕ್ರಿಶ್ಚಿಯನ್‌ ಯುನಿವರ್ಸಿಟಿಯಲ್ಲಿ ಮಾಕೊ ಮತ್ತು ಕೀ ಕೊಮುರೊ ಸಹಪಾಠಿಗಳಾಗಿದ್ದರು. 2017ರಲ್ಲಿಯೇ ಅವರು ಮುಂದಿನ ವರ್ಷ ವಿವಾಹವಾಗಲು ಉದ್ದೇಶಿಸಿರುವುದಾಗಿ ಘೋಷಿಸಿದ್ದರು. ಆದರೆ ಹಣಕಾಸಿನ ಸಮಸ್ಯೆಗಳಿಂದ ತಮ್ಮ ಮದುವೆಯನ್ನು ಮುಂದೂಡಿದ್ದರು, ಇದೀಗ ಮದುವೆಯಾದ ಹಿನ್ನಲೆ ಇಂಪೀರಿಯಲ್ ಹೌಸ್ ಕಾನೂನು ಪುರುಷ ಉತ್ತರಾಧಿಕಾರವನ್ನು ಮಾತ್ರ ಅನುಮತಿಸುತ್ತದೆ.

    ರಾಜಮನೆತನದ ಸ್ತ್ರೀ ಸದಸ್ಯರು ಸಾಮಾನ್ಯರನ್ನು ವಿವಾಹವಾದಾಗ ಅವರು ತಮ್ಮ ರಾಜಮನೆತನದ ಸ್ಥಾನಮಾನವನ್ನು ತ್ಯಜಿಸಬೇಕಾಗುತ್ತದೆ. ಹಾಗಾಗಿ ರಾಜಕುಮಾರಿ ಮಾಕೊ ಅವರು ಮಂಗಳವಾರ ಬೆಳಿಗ್ಗೆ ತೆಳು ನೀಲಿ ಬಣ್ಣದ ಬಟ್ಟೆ ಧರಿಸಿ ಹೂಗುಚ್ಛ ಹಿಡಿದು ಅರಮನೆಯಿಂದ ನಿರ್ಗಮಿಸಿದರು. ಅವರು ನಿವಾಸದ ಹೊರಗೆ ತನ್ನ ಪೋಷಕರಾದ ರಾಜ ಅಕಿಶಿನೊ ಮತ್ತು ರಾಣಿ ಕಿಕೊ ಮತ್ತು ಸಹೋದರಿ ಕಾಕೊ ಅವರಿಗೆ ನಮಸ್ಕರಿಸಿದಳು. ಬಳಿಕ ಸಹೋದರಿಯರು ಒಬ್ಬರನ್ನೊಬ್ಬರು ಆಲಿಂಗಿಸಿದರು.


    ತಾವು ಮದುವೆಯಾಗುವ ವ್ಯಕ್ತಿ ಸಾಮಾನ್ಯ ಪ್ರಜೆ ಎಂಬ ಕಾರಣಕ್ಕೆ ಭಾರಿ ಟೀಕೆ ವ್ಯಕ್ತವಾದ ಕಾರಣ ಮಾಕೊ ಅವರು ತಮಗೆ ಅರಮನೆಯಿಂದ ಸಿಗಬೇಕಿದ್ದ 12.3 ಲಕ್ಷ ಡಾಲರ್‌ (1.40 ಕೋಟಿ ಯೆನ್‌) ವರದಕ್ಷಿಣೆಯನ್ನೂ ತಿರಸ್ಕರಿಸಿದ್ದಾರೆ. 2ನೇ ಮಹಾಯುದ್ಧದ ಬಳಿಕ ಇದೇ ಪ್ರಥಮ ಬಾರಿಗೆ ರಾಜಮನೆತನದ ವ್ಯಕ್ತಿಯೊಬ್ಬರು ವರದಕ್ಷಿಣೆಯಿಂದ ದೂರ ಉಳಿದಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *