LATEST NEWS
ಜಪಾನ್ ಟೋಕಿಯೋದಲ್ಲಿ ಬೆಂಕಿಗಾಹುತಿಯಾದ 379 ಪ್ರಯಾಣಿಕರಿದ್ದ ವಿಮಾನ..ಬೆಂಕಿ ಕೆನ್ನಾಲಗೆಯಿಂದ ಬಚಾವ್ ಆದ ಪ್ರಯಾಣಿಕರು

ಜಪಾನ್ ಜನವರಿ 02 : 379 ಮಂದಿ ಇದ್ದ ವಿಮಾನವೊಂದು ಕೋಸ್ಟ್ ಗಾರ್ಡ್ ನ ವಿಮಾನಕ್ಕೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಘಟನೆ ಟೋಕಿಯೊದ ಹನೇಡಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ. ಘಟನೆಯಲ್ಲಿ 379 ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಏರ್‌ಬಸ್ A350-900 ವಿಮಾನವು ಭೂಕಂಪದಿಂದ ಸಂತ್ರಸ್ಥರಿಗೆ ನೆರವು ಕೊಂಡೊಯ್ಯುತ್ತಿದ್ದ ಕೋಸ್ಟ್ ಗಾರ್ಡ್ ನ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ 379 ಪ್ರಯಾಣಿಕರಿದ್ದ ಏರ್‌ಬಸ್ A350-900 ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಆದರೆ ವಿಮಾನದಲ್ಲಿದ್ದ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಎಲ್ಲಾ ಪ್ರಯಾಣಿಕರು ಬೆಂಕಿಯಿಂದ ಪಾರಾಗಿದ್ದಾರೆ. ಇನ್ನು ಅಪಘಾತವಾದ ಜಪಾನ್ ಕೋಸ್ಟ್ ಗಾರ್ಡ್ ವಿಮಾನದ ಐವರು ಸಿಬ್ಬಂದಿಗಳು ಸಾವನಪ್ಪಿದ್ದು, ವಿಮಾನದ ಕ್ಯಾಪ್ಟನ್ ಗಂಭೀರವಾಗಿದ್ದಾರೆ ಎಂದು ವರದಿಯಾಗಿದೆ.
