Connect with us

UDUPI

ಕಾನೂನು ಸೇವಾ ಪ್ರಾಧಿಕಾರದಿಂದ ಬ್ಯಾಂಕ್‍ನಲ್ಲೇ ಜನತಾ ಅದಾಲತ್

ಕಾನೂನು ಸೇವಾ ಪ್ರಾಧಿಕಾರದಿಂದ ಬ್ಯಾಂಕ್‍ನಲ್ಲೇ ಜನತಾ ಅದಾಲತ್

ಉಡುಪಿ ಫೆಬ್ರವರಿ 9: ಬ್ಯಾಂಕ್ ಗ್ರಾಹಕರ ಹಿತವನ್ನು ಗಮನದಲ್ಲಿರಿಸಿ ಹಾಗೂ ನ್ಯಾಯಾಲಯದಲ್ಲಿ ಅರ್ಜಿಗಳು ಸಣ್ಣ ಕಾರಣಗಳಿಂದ ಬಾಕಿ ಉಳಿಯಬಾರದೆಂಬ ಹಿನ್ನಲೆಯಲ್ಲಿ ಜನತಾ ಅದಾಲತನ್ನು ಬ್ಯಾಂಕ್‍ನಲ್ಲೇ ಆಯೋಜಿಸಲಾಗಿದೆ. ವಿವಿಧ ಕಾರಣಗಳಿಂದ ಸಾಲ ಪಡೆದುಕೊಂಡ ಗ್ರಾಹಕರು ಅನಿವಾರ್ಯವಾಗಿ ಸಾಲ ಕಟ್ಟದ ಪರಿಸ್ಥಿತಿ ಬಗ್ಗೆ ಅರಿತು ರಾಜಿ ಸಂಧಾನ ಮೂಲಕ ಸಮಸ್ಯೆ ಬಗೆಹರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಹೇಳಿದರು.

ಅವರು ಇಂದು ಉಡುಪಿ ಸಿಂಡಿಕೇಟ್ ಬ್ಯಾಂಕ್, ಪ್ರಾದೇಶಿಕ ಕಚೇರಿಯ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಸಿಂಡಿಕೇಟ್ ಬ್ಯಾಂಕ್, ಪ್ರಾದೇಶಿಕ ಕಚೇರಿ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜನತಾ ಅದಾಲತ್, ಮಧ್ಯಸ್ಥಿಕೆ ಮತ್ತು ಸಮಾಲೋಚನೆ ವಿಷಯವಾಗಿ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾನ್ಯ ಜನರಿಗೆ ನ್ಯಾಯಾಲಯ ಎಂದರೆ ಅಂಜಿಕೆ ಇರುತ್ತದೆ, ನ್ಯಾಯಾಲಯಕ್ಕೆ ಬರಲು ಅಂಜುತ್ತಾರೆ ನ್ಯಾಯಾಲಯದ ಬಗ್ಗೆ ಅವರಲ್ಲಿ ತಪ್ಪು ಕಲ್ಪನೆ ಬರುವುದರಿಂದ ಬ್ಯಾಂಕ್‍ಗಳಲ್ಲಿ ಜನತಾ ಅದಾಲತ್ ನಡೆಸಲಾಗುತ್ತಿದೆ. ಸಾಲ ಪಡೆದು ಕೊಂಡ ಗ್ರಾಹಕರು ಸಾಕಷ್ಟು ಸಮಸ್ಯೆಗಳಿಂದ ಸಾಲ ಮರುಪಾವತಿಸದೇ ಸಂಕಷ್ಟಕ್ಕೀಡಾಗುತ್ತಾರೆ. ಅಂಥವರಿಗೆ ಬಡ್ಡಿಯಲ್ಲಿ ರಿಯಾಯಿತಿ, ತಮ್ಮ ಸ್ಥಿತಿಗತಿಗೆ ಅನುಗುಣವಾಗಿ ರಿಯಾಯಿತಿ, ಹಾಗೂ ಅದಾಲತ್‍ನಲ್ಲಿ ತೀರ್ಮಾನವಾಗುವ ಗ್ರಾಹಕಪರ ತೀರ್ಪಿನಿಂದ ಪರಿಹಾರ ದೊರಕುತ್ತದೆ ಎಂದರು.

ಪ್ರತೀ ಎರಡು ತಿಂಗಳಿಗೊಮ್ಮೆ ಎರಡನೇ ಶನಿವಾರದಂದು ಜನತಾ ಆದಾಲತ್ ನಡೆಸಲಾಗುತ್ತದೆ. ಇದರ ಉದ್ದೇಶ ನ್ಯಾಯಾಲಯದಲ್ಲಿ ಬಾಕಿ ಇರುವ ವಿಷಯವನ್ನು ಅದಾಲತ್‍ನಲ್ಲಿ ಶಾಂತಿಯುತವಾಗಿ ಪರಿಹರಿಸಿ, ತೀರ್ಪನ್ನು ನೀಡಲಾಗುತ್ತದೆ. ಇಲ್ಲಿ ಕೈಗೊಳ್ಳುವ ತೀರ್ಪು ನ್ಯಾಯಾಲಯದಲ್ಲಿ ತೀರ್ಪುಗೊಳ್ಳುವಷ್ಟೇ ಪ್ರಾಮುಖ್ಯವಾಗಿರುತ್ತದೆ ಎಂದರು.

ಅದಾಲತ್ ನಡೆಸುವ ಮೊದಲು ಜನರಿಗೆ ಕಾನೂನಿನ ಮಾಹಿತಿ ಅಗತ್ಯ. ನ್ಯಾಯಾಲಯದಲ್ಲಿ ಕೇವಲ ನ್ಯಾಯಾಧೀಶರು ತೀರ್ಪು ಕೊಡುವುದು ಮಾತ್ರವಲ್ಲದೆ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಅತೀ ಶೀಘ್ರವಾಗಿ ಹೆಚ್ಚು ಖರ್ಚು ಇಲ್ಲದೆ, ಸ್ಲಲ್ಪ ಸಮಯದಲ್ಲಿ ಇತ್ಯರ್ಥಗೊಳಿಸುತ್ತಲು ಅದಾಲತ್‍ಗಳನ್ನು ನಡೆಸಲಾಗುತ್ತದೆ ಎಂಬುವುದನ್ನು ಸಾಮಾನ್ಯ ಜನರು ಅರಿತು ಕೊಳ್ಳಬೇಕು.

ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ವಕೀಲರು ಹಾಗೂ ಮಧ್ಯಸ್ಥಿಕೆದಾರಾದ ಕೆ.ಶ್ರೀಶ ಆಚಾರ್ ಮಾತನಾಡಿ, ಜನತಾ ಆದಾಲತ್‍ನ ಮುಖ್ಯ ಉದ್ದೇಶ ನಮ್ಮಲ್ಲಿ ಇರುವ ಭಿನ್ನಾಭಿಪ್ರಾಯ ಹಾಗೂ ನಮಗೆ ಇರುವ ಕಷ್ಟವನ್ನು ನಾವೇ ನಿವಾರಿಸಿಕೊಳ್ಳುವುದು.

ಅದಾಲತ್ ಅನ್ನೋದು ಕೇವಲ ಬ್ಯಾಂಕಿಗೆ ಮಾತ್ರ ಸೀಮಿತವಿರದೆ, ಕುಟುಂಬದಲ್ಲಿರುವ ವೈವಾಹಿಕ ಜೀವನ, ಅಪಘಾತ ಪರಿಹಾರ, ಜಗಳ, ಆಸ್ತಿ ವಿಚಾರ, ಚೆಕ್‍ಗಳಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವುದು ಕೂಡ ಜನತಾ ಅದಾಲತ್‍ನ ಕಾರ್ಯಸೂಚಿಗಳಲ್ಲಿದೆ.

ನ್ಯಾಯಾಲಯಗಳನ್ನು ವಿಷಯ ಮಂಡನೆ ಮಾಡಿ, ಅದರ ಬಗ್ಗೆ ಸಮಾಲೋಚನೆ ನಡೆಸಿ ತೀರ್ಪು ನೀಡಿದರೆ ಅದನ್ನು ಮತ್ತೆ ಮೇಲ್ಮನವಿಗೆ ಸಲ್ಲಿಸಿ, ಅಲ್ಲಿ ಅರಿಶೀಲಿಸಬೇಕಾಗುತ್ತದೆ. ಆದರೆ ಅದಾಲತ್‍ನಲ್ಲಿ ತೀರ್ಪು ಸಿಕ್ಕಿದ ಬಳಿಕ ಅದು ಅಲ್ಲಿಯೇ ಇತ್ಯರ್ಥಗೊಳ್ಳತ್ತದೆ. ಇದರಿಂದ ವ್ಯಕ್ತಿಗೆ ಮಾನಸಿಕವಾಗಿ ಗೆಲುವು ಸಿಗುತ್ತದೆ ಹಾಗೂ ಸಾಲ ಕೊಟ್ಟವನಿಗೆ ನೆಮ್ಮದಿ ಸಿಕ್ಕಿದಂತಾಗುತ್ತದೆ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *