DAKSHINA KANNADA
ಕಲ್ಲಡ್ಕ ಪ್ರಭಾಕರ್ ಭಟ್ ಎದುರೇ ಕಾಂಗ್ರೇಸ್ ಪಕ್ಷದ ವಿರುದ್ದ ಕಿಡಿಕಾರಿದ ಪೂಜಾರಿ

ಕಲ್ಲಡ್ಕ ಪ್ರಭಾಕರ್ ಭಟ್ ಎದುರೇ ಕಾಂಗ್ರೇಸ್ ಪಕ್ಷದ ವಿರುದ್ದ ಕಿಡಿಕಾರಿದ ಪೂಜಾರಿ
ಮಂಗಳೂರು ಸೆಪ್ಟೆಂಬರ್ 29: ಕಲ್ಲಡ್ಕ ಶ್ರೀರಾಮ ಹಾಗೂ ಶ್ರೀದೇವಿ ವಿದ್ಯಾಕೇಂದ್ರಗಳಿಗೆ ಅನುದಾನವನ್ನು ನಿಲ್ಲಿಸುವ ಮೂಲಕ ಕಾಂಗ್ರೇಸ್ ಕ್ರೂರ ಕೆಲಸ ಮಾಡಿದೆ ಎಂದು ಹಿರಿಯ ಕಾಂಗ್ರೇಸ್ ಮುಖಂಡ ಬಿ.ಜನಾರ್ಧನ ಪೂಜಾರಿ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಎದುರಲ್ಲೇ ಕಾಂಗ್ರೇಸ್ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವವನ್ನು ವೀಕ್ಷಿಸಲು ಪ್ರತಿವರ್ಷದಂತೆ ತೆರಳಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಮಾತನಾಡಿದ ಜನಾರ್ಧನ ಪೂಜಾರಿ ಬಡ ಮಕ್ಕಳಿಗೆ ಅನ್ನದಾನ ನೀಡುತ್ತಿದ್ದ ಯೋಜನೆಯನ್ನು ನಿಲ್ಲಿಸುವ ಮೂಲಕ ಸರಕಾರ ಹಾಗೂ ಕಾಂಗ್ರೇಸ್ ಸರಕಾರ ಕ್ರೂರ ಕೆಲಸವನ್ನು ಮಾಡಿದೆ.

ಈ ಅನುದಾನವನ್ನು ಸರಕಾರ ನೀಡುತ್ತಿಲ್ಲ, ಬದಲಾಗಿ ಪುಣ್ಯಕ್ಷೇತ್ರವಾದ ಕೊಲ್ಲೂರು ದೇವಸ್ಥಾನ ನೀಡುತ್ತಿದೆ. ಅದನ್ನು ತಡೆಹಿಡಿಯುವ ಮೂಲಕ ಕ್ರೂರ ಕೆಲಸವನ್ನು ಕಾಂಗ್ರೇಸ್ ಪಕ್ಷ ಮಾಡಿದೆ ಎಂದು ಕಾಂಗ್ರೇಸ್ ವಿರುದ್ಧವೇ ಕಿಡಿಕಾರಿದರು.
ಅನುದಾನ ಕಡಿತಗೊಳಿಸಿರುವುದ ವಿರುದ್ಧ ಸಾರ್ವಜನಿಕವಾಗಿಯೇ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದೇನೆ ಎಂದು ಪ್ರಭಾಕರ್ ಭಟ್ ಹಾಗೂ ಅವರ ಪತ್ನಿ ಕಮಲಾ ಭಟ್ ಜೊತೆ ಪೂಜಾರಿ ಹೇಳಿದ್ದಾರೆ. ಬಳಿಕ ಪ್ರಭಾಕರ್ ಭಟ್ ಹಾಗೂ ಅವರ ಪತ್ನಿ ಕಮಲಾ ಭಟ್ ಜೊತೆ ಕುಶಲೋಪಚಾರ ವಿಚಾರಿಸಿದ್ದಾರೆ.