LATEST NEWS
ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು ನಾನು ಸತ್ತು ಹೋಗಿದ್ದೇನೆ ಎಂದು ತಿಳಿದು ಕೊಂಡಿದ್ದಾರೆ – ಜನಾರ್ಧನ ಪೂಜಾರಿ
ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು ನಾನು ಸತ್ತು ಹೋಗಿದ್ದೇನೆ ಎಂದು ತಿಳಿದು ಕೊಂಡಿದ್ದಾರೆ – ಜನಾರ್ಧನ ಪೂಜಾರಿ
ಮಂಗಳೂರು ನವೆಂಬರ್ 5: ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು ನಾನು ಸತ್ತು ಹೋಗಿದ್ದೇನೆ ಎಂದು ತಿಳಿದು ಕೊಂಡಿದ್ದಾರೆ ಎಂದು ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಸ್ಥಾನ ಆಯ್ಕೆ ಸಂಬಂಧ ತನ್ನ ಬಳಿ ಚರ್ಚೆ ನಡೆಸಲಾಗಿದೆ ಎನ್ನುವ ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿಕೆಯನ್ನು ಖಂಡಿಸಿದ ಪೂಜಾರಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ತನ್ನ ಬಳಿ ಯಾರೂ ಯಾವ ಚರ್ಚೆಯನ್ನೂ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲಾಧ್ಯಕ್ಷರು ಕೂಡಲೇ ಈ ಬಗ್ಗೆ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಎಲ್ಲಾ ಸಮುದಾಯಕ್ಕೂ ಸಮಾನಾಂತರವಾಗಿ ಟಿಕೆಟ್ ಹಂಚಿಕೆ ಮಾಡಬೇಕೆಂದು ತಾನು ಎಐಸಿಸಿ ಉಸ್ತುವಾರಿ ವೇಣುಗೋಪಾಲ್ ಗೂ ಪತ್ರ ಬರೆದಿರುವುದಾಗಿ ಹೇಳಿದ ಪೂಜಾರಿ ತನ್ನ ಸಲಹೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ಪಾಲಾಗುವುದು ಸ್ಪಷ್ಟ ಎಂದ ಅವರು ಕಾಂಗ್ರೇಸ ಕಾರ್ಯಕರ್ತರು ಕಾಂಗ್ರೇಸ್ ಪಕ್ಷದ ಗೆಲುವಿಗೆ ಶ್ರಮವಹಿಸಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಂಗ್ರೇಸ್ ಪಕ್ಷಕ್ಕೆ ಒಂದು ಶನಿ ಇದ್ದಹಾಗೆ, ಸಿದ್ಧರಾಮಯ್ಯ ಕಾಂಗ್ರೇಸ್ ಪಕ್ಷವನ್ನು ಸರ್ವನಾಶ ಮಾಡಿಯೇ ಹೋಗುತ್ತಾರೆ ಎಂದು ಮಾಜಿ ಕೇಂದ್ರ ಸಚಿವ , ಹಿರಿಯ ಕಾಂಗ್ರೇಸ್ ಮುಖಂಡ ಬಿ. ಜನಾರ್ಧನ ಪೂಜಾರಿ ಆರೋಪಿಸಿದ್ದಾರೆ.
ಸಿದ್ಧರಾಮಯ್ಯರಿಂದಲೇ ರಾಜ್ಯದಲ್ಲಿ ಕಾಂಗ್ರೇಸ್ ಈ ಮಟ್ಟಕ್ಕೆ ಬರಲು ಕಾರಣವಾಗಿದೆ ಎಂದರು. ಸಿದ್ಧರಾಮಯ್ಯನವರಿಗೆ ಯಾವುದೇ ಜವಾಬ್ದಾರಿ ನೀಡಬಾರದು ಎಂದು ಹಲವು ಬಾರಿ ಹೈಕಮಾಂಡ್ ಗೆ ತಾನು ಪತ್ರ ಬರೆದಿರುವುದಾಗಿ ಹೇಳಿದ ಪೂಜಾರಿ ಸಿದ್ಧರಾಮಯ್ಯ ಕಾಂಗ್ರೇಸ್ ಪಕ್ಷದಲ್ಲಿ ಇರುವ ತನಕ ಕಾಂಗ್ರೇಸ್ ಗೆ ಶನಿಯೇ ಎಂದರು.