FILM
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಾಯಿ ಪಾರ್ಶ್ವವಾಯುವಿಗೆ ತುತ್ತಾಗಿ ನಿಧನ

ಮುಂಬೈ ಎಪ್ರಿಲ್ 06: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ತಾಯಿ ಕಿಮ್ ಫರ್ನಾಂಡಿಸ್ ಭಾನುವಾರ ಪಾರ್ಶ್ವವಾಯುವಿಗೆ ತುತ್ತಾಗಿ ನಿಧನರಾಗಿದ್ದಾರೆ. ಮಾರ್ಚ್ 24 ರಂದು ಪಾರ್ಶ್ವವಾಯುವಿಗೆ ಒಳಗಾದ ನಂತರ ಕಿಮ್ ಫೆರ್ನಾಂಡಿಸ್ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಟೈಮ್ಸ್ ನೌ ಪ್ರಕಾರ, ನಟಿಯ ತಾಯಿಗೆ ಹೃದಯಾಘಾತವಾದ ಹಿನ್ನಲೆ ಕಳೆದ ತಿಂಗಳು ಮಾರ್ಚ್ 24, 2025 ರಂದು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಐಸಿಯು (ತೀವ್ರ ನಿಗಾ ಘಟಕ) ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಬಹ್ರೇನ್‌ನ ಮನಾಮದಲ್ಲಿ ವಾಸಿಸುತ್ತಿದ್ದ ಕಿಮ್, ಈ ಹಿಂದೆ 2022 ರಲ್ಲಿ ಇದೇ ರೀತಿಯ ಆರೋಗ್ಯ ಬಿಕ್ಕಟ್ಟನ್ನು ಎದುರಿಸಿದ್ದರು ಮತ್ತು ಆಗಲೂ ಬಹ್ರೇನ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಕಿಮ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ಸ್ಥಳಾಂತರಿಸಿದ ನಂತರ ಜಾಕ್ವೆಲಿನ್ ಮತ್ತು ಅವರ ತಂದೆ ಎಲ್ಲಾಯ್ ಫೆರ್ನಾಂಡಿಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಮಾರ್ಚ್ 26 ರಂದು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2025 ಪಂದ್ಯದಲ್ಲಿ ಜಾಕ್ವೆಲಿನ್ ಡ್ಯಾನ್ಸ್ ಪರ್ಫಾಮೆನ್ಸ್ ನೀಡಬೇಕಿತ್ತು. ಆದರೆ ತಾಯಿಗೆ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಅವರು ಆ ಕಾರ್ಯಕ್ರಮದಿಂದ ದೂರ ಹೊರಗುಳಿದಿದ್ದರು ಎಂದು ವರದಿ ತಿಳಿಸಿದೆ.
1 Comment