LATEST NEWS
ಅನಂತ್ ಕುಮಾರ್ ಹೆಗಡೆ ಭಾರತೀಯನಾಗಲು ಯೋಗ್ಯರಲ್ಲ – ಐವನ್ ಡಿಸೋಜಾ

ಮಂಗಳೂರು ಅ.11: ಬಿಎಸ್‍ಎನ್‍ಎಲ್ ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು ಎಂದ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ವಿರುದ್ದ ಮಾಜಿ ಶಾಸಕ ಐವನ್ ಡಿಸೋಜಾ ಕಿಡಿಕಾರಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೇಸ್ ಮುಖಂಡ ಐವನ್ ಡಿಸೋಜಾ ದೇಶದ್ರೋಹಿಗಳನ್ನು ಪತ್ತೆ ಹಚ್ಚುವ ಅನಂತ್ ಕುಮಾರ್ ಹೆಗ್ಡೆಯವರೇ ನೀವು ಸಂಸದರಾಗಲು ಅಲ್ಲ ಭಾರತೀಯನಾಗಲು ಕೂಡ ಯೋಗ್ಯರಲ್ಲ.BSNL ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ಯಾವುದೇ ಕ್ರಮಕೈಗೊಳ್ಳದೇ ಇದೀಗ ಬಡಪಾಯಿ BSNL ನೌಕರರಿಗೆ ದೇಶದ್ರೋಹಿ ಪಟ್ಟವನ್ನು ಕಟ್ಟುತ್ತೀರಲ್ವ? ನಾಚಿಕೆಯಾಗಬೇಕು ಬಿ.ಜೆ.ಪಿ.ಯವರಿಗೆ ಎಂದು ಪ್ರಶ್ನಿಸಿದ್ದಾರೆ.
