LATEST NEWS
ಕ್ರೈಸ್ತ್ ಸಮುದಾಯದ ಅಭಿವೃದ್ದಿಗೆ 500 ಕೋಟಿ ರೂಪಾಯಿ ಅನುದಾನಕ್ಕೆ ಆಗ್ರಹ – ಐವನ್ ಡಿಸೋಜಾ
ಕ್ರೈಸ್ತ್ ಸಮುದಾಯದ ಅಭಿವೃದ್ದಿಗೆ 500 ಕೋಟಿ ರೂಪಾಯಿ ಅನುದಾನಕ್ಕೆ ಆಗ್ರಹ – ಐವನ್ ಡಿಸೋಜಾ
ಮಂಗಳೂರು ಜನವರಿ 18: ಕ್ರೈಸ್ತರ ಅಬ್ಯೋದಯದ ದೃಷ್ಠಿಯಿಂದ ಕೈಸ್ತ ಅಭಿವೃದ್ದಿ ಪರಿಷತ್ ನ್ನು ಕ್ರೈಸ್ತ್ ಅಭಿವೃದ್ದಿ ನಿಗಮವಾಗಿ ಪರಿವರ್ತಿಸಬೇಕೆಂದು ವಿಧಾನ ಪರಿಷತ್ ನ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರ ಐವನ್ ಡಿಸೋಜಾ 2011 ನೇ ಸಾಲಿನಲ್ಲಿ 50 ಕೋಟಿ ರೂಪಾಯಿ ಅನುದಾನದಲ್ಲಿ ಪ್ರಾರಂಭಗೊಂಡ ಕ್ರೈಸ್ತ ಅಭಿವೃದ್ದಿ ಪರಿಷತ್ತನ್ನು ಕ್ರೈಸ್ತ ಅಭಿವೃದ್ದಿ ನಿಗಮವನ್ನಾಗಿ ಘೋಷಿಸ ಬೇಕೆಂದು ಈಗಾಗಲೇ ಕ್ರೈಸ್ತ ಅಭಿವೃದ್ಧಿ ಪರಿಷತ್ ತೀರ್ಮಾನಿಸಿದೆ ಎಂದು ಅವರು ಹೇಳಿದರು.
ಮುಂಬರುವ 2018-19 ನೇ ಸಾಲಿನ ಬಜೆಟ್ ನಲ್ಲಿ ಕ್ರೈಸ್ತ ಸಮುದಾಯದ ಅಭಿವೃದ್ದಿಗೆ 500 ಕೋಟಿ ರೂಪಾಯಿ ಅನುದಾನ ಒದಗಿಸಬೇಕೆಂದು ಅವರು ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದರು.
ಪ್ರಸ್ತುತ 2017- 18 ನೇ ಸಾಲಿಗೆ 175 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು ನೀಡಿದ ಅನುದಾನವು ರಾಜ್ಯ ಅಲ್ಪಸಂಖ್ಯಾತರ ಇಲಾಖೆ ಮತ್ತು ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಮೂಲಕ ಅನುದಾನವನ್ನು ರಾಜ್ಯದಲ್ಲಿ ಶೇಕಡಾ 4 ರಷ್ಠಿರುವ ಕ್ರೈಸ್ತ ಸಮುದಾಯದ ಆರ್ಹ ಫಲಾನುಭವಿಗಳಿಗೆ ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.
ಒದಗಿಸಲಾದ 175 ಕೋಟಿ ಗೆ ಮೇಲಾಗಿ 300 ಕೋಟಿಯಷ್ಟು ಫಲಾನುಭವಿಯಾಗಲು ಅರ್ಹರಿರುವ ಅರ್ಜಿದಾದರು ಅರ್ಜಿಸಲ್ಲಿಸಿದ್ದಾರೆ. ಆದರೆ ಅನುದಾನದ ಕೊರತೆಯಿಂದ ಫಲಾನುಭವಿಗಳಿಗೆ ಹಣ ನೀಡಲು ಸಾದ್ಯವಾಗಿಲ್ಲ ಎಂದು ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ 2018-19 ನೇ ಸಾಲಿನಲ್ಲಿ ಮಂಡಿಸುವ ಬಜೆಟ್ ನಲ್ಲಿ ಕನಿಷ್ಟ 500 ಕೋಟಿ ರೂಪಾಯಿ ಅನುದಾನವನ್ನು ಘೋಷಿಸಬೇಕೆಂದು ಮುಖ್ಯಮಂತ್ರಿ ಅವರಿಗೆ ಬೇಡಿಕೆ ಸಲ್ಲಿಸಿರುವುದಾಗಿ ಅವರು ತಿಳಿಸಿದರು. ಈ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಮುಖ್ಯಮಂತ್ರಿ ಅವರು ನೀಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು