LATEST NEWS
ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಚಿನ್ನದ ಮಳಿಗೆಗಳ ಮೇಲೆ ಐಟಿ ದಾಳಿ

ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಚಿನ್ನದ ಮಳಿಗೆಗಳ ಮೇಲೆ ಐಟಿ ದಾಳಿ
ಮಂಗಳೂರು ಜೂನ್ 27: ಉಡುಪಿ ಹಾಗೂ ಮಂಗಳೂರಿನ ಚಿನ್ನದ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಕಡತ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರಿನ ಕಂಕನಾಡಿಯಲ್ಲಿರುವ ಪ್ರತಿಷ್ಠಿತ ಸುಲ್ತಾನ್ ಗೋಲ್ಡ್ ಮತ್ತು ಸಿಟಿ ಗೋಲ್ಡ್ ಮಳಿಗೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ನಿನ್ನೆಯಿಂದ ಈ ಚಿನ್ನದ ಮಳಿಗೆಗಳ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಉಡುಪಿ ಹಾಗೂ ಶಿವಮೊಗ್ಗದಲ್ಲಿ ಸುಲ್ತಾನ್ ಗೋಲ್ಡ್ ಚಿನ್ನದ ಮಳಿಗೆಗಳ ಮೇಲೂ ಈ ದಾಳಿ ನಡೆದಿದೆ.

ಸುಲ್ತಾನ್ ಗೋಲ್ಡ್ ಚಿನ್ನದ ಮಳಿಗೆಗಳು ಕೇರಳದ ರವೂಫ್ ಎಂಬವರಿಗೆ ಸೇರಿದ್ದು, ಮಂಗಳೂರು, ಉಡುಪಿ, ಶಿವಮೊಗ್ಗದಲ್ಲಿರುವ ಮಳಿಗೆಗಳ ಮೇಲೂ ಐಟಿ ಅಧಿಕಾರಿಗಳು ಏಕಾಕಾಲಕ್ಕೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.