LATEST NEWS
ಭೂಗತ ಲೋಕದಲ್ಲಿದ್ದರೂ ಹಿಜ್ಬುಲ್ಲಾಗಳ ಮೇಲೆ ಬಾಂಬ್ ದಾಳಿ -ಲೆಬನಾನ್ ನಲ್ಲಿ ತೀವ್ರಗೊಂಡ ಇಸ್ರೇಲ್ ಕಾರ್ಯಾಚರಣೆ
ಟೆಲ್ ಅವಿವ್ ಸೆಪ್ಟೆಂಬರ್ 04: ಇರಾನ್ ಕ್ಷಿಪಣಿಗಳ ಮೂಲಕ ಇಸ್ರೇಲ್ ಗೆ ಬೆದರಿಕೆ ಒಡ್ಡಿದರೂ ಕೂಡ ಇಸ್ರೇ್ಲ್ ಮಾತ್ಪ ಲೆಬನಾನ್ ನಲ್ಲಿರುವ ಹಿಜ್ಬುಲ್ಲಾ ಉಗ್ರರ ವಿರುದ್ದ ದಾಳಿ ಮುಂದುವರೆಸಿದ್ದಾರೆ.
ಇತ್ತೀಚೆಗೆ ಹತ್ಯೆಗೀಡಾದ ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ನಾಯಕ ಹಸನ್ ನಸ್ರಲ್ಲಾನ ಸೋದರ ಸಂಬಂಧಿ ಹಾಗೂ ಆತನ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿರುವ ಹಶೀಂ ಸೈಫುದ್ದೀನ್ ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ಶುಕ್ರವಾರ ಭಾರಿ ಬಾಂಬ್ ದಾಳಿ ನಡೆಸಿವೆ.
ಲೆಬನಾನ್ ರಾಜಧಾನಿ ಬೈರೂತ್ ಸಮೀಪ ಇದ್ದ ಭೂಗತ ಬಂಕರ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಯುದ್ಧ ಆರಂಭವಾದ ಬಳಿಕ ಇಸ್ರೇಲ್ ನಡೆಸಿದ ಅತಿ ದೊಡ್ಡ ಬಾಂಬ್ ದಾಳಿ ಇದಾಗಿದೆ ಎಂದು ಲೆಬನಾನ್‌ನ ಸರ್ಕಾರಿ ಸುದ್ದಿ ಮಾಧ್ಯಮ ವರದಿ ಮಾಡಿದೆ.
ಹಿಝ್ಬುಲ್ಲಾ ಹೋರಾಟಗಾರರ ನೆಲೆಯನ್ನು ಗುರಿ ಮಾಡಿ ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 37 ಮಂದಿ ಮೃತಪಟ್ಟಿದ್ದು, 151 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಬೈರೂತ್ ನಗರದ ದಕ್ಷಿಣ ಉಪನಗರಗಳನ್ನು ಮತ್ತು ಬೈರೂತ್ ವಿಮಾನ ನಿಲ್ದಾಣವನ್ನು ಗುರಿ ಮಾಡಿ ಶುಕ್ರವಾರ ಮುಂಜಾನೆ ಇಸ್ರೇಲ್ ದಾಳಿ ನಡೆಸುತ್ತಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಗುರುವಾರ ಇಸ್ರೇಲ್, ಲೆಬನಾನ್ ರಾಜಧಾನಿ ಬೈರೂತ್ ನಲ್ಲಿರುವ ಹಿಝ್ಬುಲ್ಲಾ ಹೋರಾಟಗಾರರ ಕೇಂದ್ರ ಕಚೇರಿಯ ಮೇಲೆ ದಾಳಿ ನಡೆಸಿದ್ದು, ಯುದ್ಧವಿಮಾನಗಳು ದೇಶದ ಪ್ರಮುಖ ನಗರಗಳ ಮೇಲೆ ಗುಂಡಿನ ಮಳೆಗೆರೆಯುತ್ತಿವೆ.