LATEST NEWS
ಇಸ್ರೆಲ್ ಮತ್ತು ಇರಾನ್ ನಡುವಿನ ಯುದ್ದ ಒಂದೇ ದಿನಕ್ಕೆ ಮುಗಿತಾ…!!
ದೆಹಲಿ ಎಪ್ರಿಲ್ 15: ಇಸ್ರೇಲ್ ವಿರುದ್ದ ತಿರುಗಿ ಬಿದ್ದು, ನೂರಾರು ಕ್ಷಿಪಣಿ ಹಾರಿಸಿ ಇಸ್ರೇಲ್ ಮೇಲೆ ಯುದ್ದಕ್ಕೆ ಹೊರಟ್ಟಿದ್ದ ಇರಾನ್ ಇದೀಗ ಥಂಡಾ ಆಗಿದೆ. ನಾನು ದಾಳಿ ಮಾಡಿದ್ದು, ನನ್ನ ದೇಶದ ರಕ್ಷಣೆಗೆ ಎಂದು ಇರಾನ್ ಹೇಳಿದ್ದು, ಇಸ್ರೇಲ್ ಗೆ ಪ್ರತಿದಾಳಿ ನಡೆಸದಂತೆ ಎಚ್ಚರಿಕೆ ನೀಡಿದೆ. ತನ್ನ ಕಮಾಂಡರ್ ಹತ್ಯೆಯ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಇರಾನ್ 300 ಕ್ಷಿಪಣಿಗಳನ್ನು ಹಾರಿಸಿತ್ತು. ಇವುಗಳನ್ನು ಇಸ್ರೇಲ್ ತಡೆದಿದೆ. 170 ಯುಎವಿಗಳನ್ನು ಇರಾನ್ ಹಾರಿಸಿತ್ತು. ಇವುಗಳನ್ನು ಇಸ್ರೇಲ್ ತಡೆದಿದೆ. ಇವು ಯಾವುದು ತನ್ನ ವಾಯುನೆಲೆಯನ್ನು ಪ್ರವೇಶ ಮಾಡಿಲ್ಲ ಎಂದು ಇಸ್ರೇನ್ ಸೇನೆಯ ವಕ್ತಾರ ಡೇನಿಯಲ್ ಹಗೆರಿ ತಿಳಿಸಿದ್ದಾರೆ.
ಈ ನಡುವೆ ಅಮೇರಿಕ ಇರಾನ್ ಗೆ ವಾರ್ನಿಂಗ್ ನೀಡಿದ್ದು, ಇಸ್ರೇಲ್ ವಿರುದ್ದದ ಯಾವುದೇ ಆಕ್ರಮಣಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಅಮರಿಕ ಜಿ7 ರಾಷ್ಟ್ರಗಳ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ಚರ್ಚೆಯನ್ನು ನಡೆಸಿತ್ತು.
ಇದರ ಬೆನ್ನಲ್ಲೇ ಸೈಲೆಂಟ್ ಆದ ಇರಾನ್ ನಂತರ ಯಾವುದೇ ರೀತಿಯ ದಾಳಿ ನಡೆಸುವ ಸಾಹಸಕ್ಕೆ ಮುಂದಾಗಿಲ್ಲ. ಈ ನಡುವೆ ದಾಳಿ ಮಾಡಿದರೆ ದಿಟ್ಟ ಉತ್ತರ ನೀಡಬೇಕು ಎಂದು ವರ್ಷದಿಂದ ಕಾಯುತ್ತಿದ್ದೇವೆ. ನಮ್ಮ ಮೇಲೆ ಯಾರು ದಾಳಿ ಮಾಡುತ್ತಾರೋ ಅವರ ಮೇಲೆ ನಾವು ಪ್ರತಿದಾಳಿ ಮಾಡಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಏಕೆಂದರೆ ನಮ್ಮ ಸೈನಿಕರು, ಜನತೆ ಬಲಶಾಲಿಗಳು ಎಂದು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಗುಡುಗಿದ್ದಾರೆ. ಆದರೆ ಇಸ್ರೇಲ್ ಮಿತ್ರ ದೇಶ ಅಮೆರಿಕ ತಣ್ಣಗಾಗಿದ್ದು, ನಾವು ಯುದ್ಧದಲ್ಲಿ ಭಾಗಿ ಆಗಲ್ಲ. ಏನಿದ್ದರೂ ರಾಜತಾಂತ್ರಿಕ ಮಾರ್ಗದ ಮೂಲಕ ನಮ್ಮ ಪ್ರತೀಕಾರ ಇರಲಿದೆ’ ಎಂದು ಅಮೆರಿಕ ರಕ್ಷಣಾ ವಕ್ತಾರ ಜಾನ್ ಕಿರ್ಬಿ ಹೇಳಿದಾರೆ.
ಏ.1ರಂದು ಸಿರಿಯಾದ ಡಮಾಸ್ಕಸ್‌ನ ಇರಾನ್ ದೂತಾವಾಸದ ಮೇಲೆ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಇರಾನ್‌ನ ಜನರಲ್‌ಗಳು ಹತರಾಗಿದ್ದರು. ಅದಾದ ಬಳಿಕ ಇಸ್ರೇಲ್ ಮೇಲಿನ ಇರಾನ್ ಆಕ್ರೋಶ ವಿಕೋಪಕ್ಕೆ ಹೋಗಿತ್ತು. ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಬಹುದು ಎಂದು ಅಮೆರಿಕ ಹೇಳುತ್ತಲೇ ಬಂದಿತ್ತು. ಅದರಂತೆ 170 ಡೋನ್, 30 ಕ್ರೂಸ್ ಕ್ಷಿಪಣಿ ಹಾಗೂ 120 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿ ಇರಾನ್ ದಾಳಿ ಮಾಡಿದೆ. ಇಸ್ರೇಲ್ ರಕ್ಷಣಾ ಪಡೆಗಳವಕ್ತಾರಡೇನಿಯಲ್ ಹಗರಿ ಶೇ.99ರಷ್ಟನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಅನಾಹುತವಾಗಿಲ್ಲ.