LATEST NEWS
ಆರು ದಿನಗಳ ಪ್ರವಾಸಕ್ಕೆ ಇಸ್ರೇಲ್ ಪ್ರಧಾನಿ ಭಾರತಕ್ಕೆ : ಶಿಷ್ಟಾಚಾರಗಳನ್ನು ಬದಿಗೊತ್ತಿ ಸ್ವಾಗತಿಸಿದ ಮೋದಿ
ಆರು ದಿನಗಳ ಪ್ರವಾಸಕ್ಕೆ ಇಸ್ರೇಲ್ ಪ್ರಧಾನಿ ಭಾರತಕ್ಕೆ : ಶಿಷ್ಟಾಚಾರಗಳನ್ನು ಬದಿಗೊತ್ತಿ ಸ್ವಾಗತಿಸಿದ ಮೋದಿ
ನವದೆಹಲಿ, ಜನವರಿ 14 : ಆರು ದಿನಗಳ ಭಾರತ ಪ್ರವಾಸಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮೀನ್ ನೆತನ್ಯಾಹು ಇಂದು ನವದೆಹಲಿಗೆ ಆಗಮಿಸಿದರು.
ಅಪರಾಹ್ನ 1.15 ರ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಅಗಮಿಸಿದ ಇಸ್ರೇಲ್ ಪ್ರಧಾನಿ ಬೆಂಝಮಿನ್ ನೆತನ್ಯಾಹು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಶಿಷ್ಟಾಚಾರಗಳನ್ನು ಬದಿಗೊತ್ತಿ ಆತ್ಮೀಯವಾಗಿ ಸ್ವಾಗತಿಸಿದರು.
ಪತ್ನಿ ಹಾಗೂ 130 ಮಂದಿಯ ಅಧಿಕಾರಿಗಳ ನಿಯೋಗದೊಂದಿಗೆ ಪಾಲಂ ವಿಮಾನ ಆಗಮಿಸಿದ ನೆತನ್ಯಾಹು ಅವರನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಅಪ್ಪುಗೆ ನೀಡಿ , ಹಸ್ತಲಾಘವ ಮಾಡುವ ಮೂ ಲಕ ಸ್ವಾಗತಿಸಿದರು.
ನಂತರ ಮೋದಿ ಮತ್ತು ನೆತನ್ಯಾಹು ದೆಹಲಿಯಲ್ಲಿರುವ 1ನೇ ವಿಶ್ವ ಯುದ್ಧ ಹುತಾತ್ಮರ ಸ್ಮಾರಕ ತೀನ್ ಮೂರ್ತಿ ಗೆ ತೆರಳಿ ನಮನ ಸಲ್ಲಿದರು.
ಇಂದಿನಿಂದ ಆರು ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ಬೆಂಜಮಿನ್ ಅವರು ಅವರು ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಬುಧವಾರ ಗುಜರಾತ್‌ಗೆ ತೆರಳಲಿರುವ ನೆತನ್ಯಾಹು ಮೋದಿ ಅವರೊಂದಿಗೆ ಸಾರ್ವಜನಿಕ ರೋಡ್ ಶೋ ನಡೆಸಲಿದ್ದಾರೆ.
ನೆತನ್ಯಾಹು ಅವರು ಶುಕ್ರವಾರ ಮುಂಬಯಿಯಲ್ಲಿ ಬಾಲಿವುಡ್‌ನ ಗಣ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಮೋದಿ ಇಸ್ರೇಲ್ ಭೇಟಿ ನೀಡಿದ ಆರು ತಿಂಗಳ ಬಳಿಕ ಇಸ್ರೇಲ್ ಪ್ರಧಾನಿ ಭಾರತ ಪ್ರವಾಸ ಕೈಗೊಂಡಿದ್ದಾರೆ.
ಅಂದು ಮೋದಿ ಇಸ್ರೇಲಿಗೆ ಭೇಟಿ ನೀಡಿದ ಸಂದರ್ಭ ಬೆಂಜಮೀನ್ ನೆತನ್ಯಾಹು ಸ್ವತ: ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದರು.
15 ವರ್ಷಗಳ ಬಳಿಕ ಇಸ್ರೇಲ್ ಪ್ರಧಾನಿಯೊಬ್ಬರು ಭಾರತ ಪ್ರವಾಸದಲ್ಲಿದ್ದಾರೆ.
ಮೋದಿ ಅವರು ಸ್ವತ: ವಿಮಾನ ನಿಲ್ದಾಣಕ್ಕೆ ಆಗಮಿಸಿ ಸ್ವಾಗತಿಸಿರುವುದಕ್ಕೆ ಇಸ್ರೇಲ್ ಪ್ರಧಾನಿ ಧನ್ಯವಾದ ಅರ್ಪಿಸಿದ್ದಾರೆ.
ಇಂದಿನ ಭಾರತ ಪ್ರವಾಸ ನನ್ನ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ ಎಂದು ಬಣ್ಣಿಸಿದ್ದಾರೆ..