Connect with us

LATEST NEWS

ಹಮಾಸ್ ಉಗ್ರರ ದಾಳಿಗೆ 22 ಇಸ್ರೇಲ್ ನಾಗರಿಕರ ಬಲಿ – ಯುದ್ದ ಪ್ರಾರಂಭವಾಗಿದೆ ಎಂದ ಇಸ್ರೇಲ್ ಪ್ರಧಾನಿ

ಟೆಲ್ ಅವಿವ್ ಅಕ್ಟೋಬರ್ 07: ಗಾಜಾಪಟ್ಟಿಯ ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ನ 22 ಮಂದಿ ಸಾವನಪ್ಪಿದ್ದು, 250 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದ್ದು, ಹಮಾಸ್ ಉಗ್ರರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದೆವೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯಿಸಿದ್ದಾರೆ.


‘ಇಸ್ರೇಲ್ –ಪ್ಯಾಲೆಸ್ಟೀನ್‌ ಸಂಘರ್ಷ ಕುರಿತು ವಿಡಿಯೊ ಸಂದೇಶ ಹಂಚಿಕೊಂಡಿರುವ ಅವರು, ‌‘ಇಸ್ರೇಲ್ ನಾಗರಿಕರೇ, ನಾವು ಯುದ್ಧದಲ್ಲಿದ್ದೇವೆ. ಇದು ಕೇವಲ ಕಾರ್ಯಾಚರಣೆ ಅಲ್ಲ. ಬದಲಿಗೆ ಯುದ್ಧವಾಗಿದೆ. ಹಮಾಸ್ ಉಗ್ರರು ಇಂದು ಬೆಳಿಗ್ಗೆ ಇಸ್ರೇಲ್‌ನ ನಾಗರಿಕರ ಮೇಲೆ ಮಾರಣಾಂತಿಕ ಹಠಾತ್ ದಾಳಿಯನ್ನು ಪ್ರಾರಂಭಿಸಿದೆ. ನಾವೂ ಕೂಡ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದೇವೆ’ ಎಂದು ವಿವರಿಸಿದ್ದಾರೆ. ಹಮಾಸ್ ಉಗ್ರರ ರಾಕೆಟ್ ದಾಳಿಯಿಂದ ಕೆರಳಿರುವ ಇಸ್ರೇಲ್, ಗಾಜಾ ವಿರುದ್ಧ ಯುದ್ಧ ಘೋಷಣೆ ಮಾಡಿದೆ. ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ.


ಇಂದು ಮುಂಜಾನೆಯಿಂದಲೇ ಇಸ್ರೇಲ್‌ನ ವಸತಿ ಪ್ರದೇಶಗಳಲ್ಲಿ ಹಮಾಸ್ ಉಗ್ರರು ರಾಕೆಟ್ ದಾಳಿ ನಡೆಸಿದ್ದಾರೆ. ಶಸ್ತ್ರಸಜ್ಜಿತ ಹಮಾಸ್ ಉಗ್ರರು ಪ್ರಮುಖ ಬೀದಿಗಳಲ್ಲಿ ಗಸ್ತು ತಿರುಗುತ್ತಿದ್ದು, ಇಸ್ರೇಲ್‌ ನಾಗರಿಕರನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಶನಿವಾರ ಬೆಳಗ್ಗೆ ಇಸ್ರೇಲ್‌ಗೆ ಹಮಾಸ್‌ನಿಂದ ಮಾರಣಾಂತಿಕ ರಾಕೆಟ್ ದಾಳಿಯಲ್ಲಿ ಶಾರ್ ಹನೆಗೆವ್ ಪ್ರಾದೇಶಿಕ ಮಂಡಳಿಯ ಮುಖ್ಯಸ್ಥ ಓಫಿರ್ ಲೀಬ್‌ಸ್ಟೈನ್ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. “ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಪಟ್ಟಣವನ್ನು ರಕ್ಷಿಸಲು ಹೋದಾಗ ಓಫೀರ್ ಕೊಲ್ಲಲ್ಪಟ್ಟರು” ಎಂದು ಕೌನ್ಸಿಲ್ನ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಹೇಳಿದೆ. ಕೌನ್ಸಿಲ್‌ನ ಉಪ ಮುಖ್ಯಸ್ಥ ಯೋಸ್ಸಿ ಕೆರೆನ್ ಅವರು ಲೀಬ್‌ಸ್ಟೈನ್ ಸಾವಿನ ನಂತರ ದೇಹದ ಮಧ್ಯಂತರ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಶನಿವಾರ ಗಾಜಾ ಪಟ್ಟಿಯಿಂದ ಇಸ್ರೇಲ್‌ಗೆ 5,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಲಾಯಿತು, ಹಮಾಸ್‌ನ ಸಶಸ್ತ್ರ ವಿಭಾಗವು “ಆಪರೇಷನ್ ಅಲ್-ಅಕ್ಸಾ ಫ್ಲಡ್” ಅನ್ನು ಪ್ರಾರಂಭಿಸಿದೆ ಎಂದು ಘೋಷಿಸಿತು. “ನಾವು ಎಲ್ಲಾ ಆಕ್ರಮಣದ (ಇಸ್ರೇಲ್) ಅಪರಾಧಗಳನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ, ಹೊಣೆಗಾರಿಕೆಯಿಲ್ಲದೆ ಅವರ ಮೇಲೆ ಆಕ್ರಮಣ ಮಾಡುವ ಸಮಯ ಮುಗಿದಿದೆ” ಎಂದು ಗುಂಪು ಹೇಳಿದೆ. “ನಾವು ಆಪರೇಷನ್ ಅಲ್-ಅಕ್ಸಾ ಪ್ರವಾಹವನ್ನು ಘೋಷಿಸುತ್ತೇವೆ ಮತ್ತು ನಾವು 20 ನಿಮಿಷಗಳ ಮೊದಲ ಸ್ಟ್ರೈಕ್‌ನಲ್ಲಿ 5,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದ್ದೇವೆ ಎಂದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *