Connect with us

LATEST NEWS

ಇಸ್ರೇಲ್ ಮೊದಲ ಟಾರ್ಗೆಟ್ ಅಷ್ಟೇ, ಇಡೀ ಜಗತ್ತನ್ನು ನಮ್ಮ ಕಾನೂನಿನ ವ್ಯಾಪ್ತಿಗೆ ತರುತ್ತೇವೆ : ಹಮಾಸ್‌

ಇಸ್ರೇಲ್ ಒಂದೇ ನಮ್ಮ ಗುರಿಯಲ್ಲ.ಇಡೀ ಜಗತ್ತನ್ನು ತಮ್ಮ ಕಾನೂನಿನ ವ್ಯಾಪ್ತಿಗೆ ತರುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾವು ಏನು ಬೇಕಾದರೂ ಮಾಡಲು ಸಿದ್ದ ಎಂದು ಹೇಳುವ ಮೂಲಕ ಹಮಾಸ್ ಕಮಾಂಡರ್ ಮಹ್ಮದ್ ಅಲ್ ಜಹಾರ್‌ ಉದ್ಧಟತನ ಮೆರೆದಿದ್ದಾರೆ.

ಗಾಜಾಪಟ್ಟಿ: ಇಸ್ರೇಲ್ ಒಂದೇ ನಮ್ಮ ಗುರಿಯಲ್ಲ.ಇಡೀ ಜಗತ್ತನ್ನು ತಮ್ಮ ಕಾನೂನಿನ ವ್ಯಾಪ್ತಿಗೆ ತರುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾವು ಏನು ಬೇಕಾದರೂ ಮಾಡಲು ಸಿದ್ದ ಎಂದು ಹೇಳುವ ಮೂಲಕ ಹಮಾಸ್ ಕಮಾಂಡರ್ ಮಹ್ಮದ್ ಅಲ್ ಜಹಾರ್‌ ಉದ್ಧಟತನ ಮೆರೆದಿದ್ದಾರೆ.

ಇಸ್ರೇಲ್ ನಮ್ಮ ಮೊದಲ ಟಾರ್ಗೆಟ್ ಅಷ್ಟೇ. ಇಡೀ ಪ್ರಪಂಚದ ಮೇಲೆ ತಮ್ಮ ಪ್ರಭಾವವನ್ನು ವಿಸ್ತರಣೆ ಮಾಡುವ ಗುರಿ ಹೊಂದಿದ್ದೇವೆ. ಇಡೀ ಜಗತ್ತು ಅನ್ಯಾಯರಹಿತವಾಗಿರಬೇಕು. ದಮನ ಮಾಡುವಂತಹ ವ್ಯವಸ್ಥೆ ಇರಬಾರದು ಎಂದು ಹೇಳಿದೆ.

ಲೆಬನಾನ್, ಸಿರಿಯಾ, ಇರಾಕ್‌ನಂತಹ ದೇಶಗಳಲ್ಲಿ ಅರಬ್ಬರು, ಪ್ಯಾಲೆಸ್ಟೈನ್‌ (Palestine) ವಿರುದ್ಧ ನಡೆಯುತ್ತಿರುವ ಅಪರಾಧ, ಹತ್ಯೆಗಳು ಇನ್ನೆಲ್ಲಿಯೂ ನಡೆಯಬಾರದು. ಆ ರೀತಿ ಮಾಡ್ತೇವೆ ಎಂದು ಹಮಾಸ್ ಕಮಾಂಡರ್ ಮಹ್ಮದ್ ಅಲ್ ಜಹಾರ್‌ (Mahmoud al-Zahar) ಹೇಳಿಕೆ ನೀಡಿದ್ದಾನೆ.

 

ಈ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ನೆತನ್ಯಾಹು (Israel PM Netanyahu) ಹಮಾಸ್‌ನ ಗಿಡ್ಡು ಬೆದರಿಕೆಗಳಿಗೆ ಹೆದರಲ್ಲ. ನಮ್ಮ ಹೋರಾಟ ಮುಂದುವರೆಸ್ತೇವೆ. ಹಮಾಸ್ ಸಂಘಟನೆಯನ್ನು ಸರ್ವನಾಶ ಮಾಡುತ್ತೇವೆ ಎಂದು ವಾರ್ನಿಂಗ್ ನೀಡಿದ್ದಾರೆ. ಗಾಜಾ ಗಡಿಯಲ್ಲಿರುವವರು ಮನೆ ತೊರೆದು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು ಎಂದು ನೆತನ್ಯಾಹು ಸರ್ಕಾರ ತಿಳಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *