ನವದೆಹಲಿ, ಮಾರ್ಚ್ 07: ಶ್ರೀಲಂಕಾದ ಸಮುದ್ರದಲ್ಲಿ ಇರಾನ್ ಗೆ ಸೇರಿದ್ದ ಯುದ್ದನೌಕೆಯನ್ನು ಅಮೇರಿಕಾ ಹೊಡೆದುರುಳಿಸಿದ್ದು, ಇದೀಗ ಇರಾನ್ ನ ಮತ್ತೊಂದು ಯುದ್ದ ನೌಕೆ ಭಾರತದಲ್ಲಿ ಲಂಗರು ಹಾಕಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಸಮುದ್ರ ಪ್ರದೇಶದಲ್ಲಿ ಇರಾನ್ಗೆ ಸೇರಿದ ಯುದ್ಧ ಹಡಗು ಐರಿಸ್ ದೇನಾ ಮೇಲೆ ಅಮೆರಿಕದ ಜಲಾಂತರ್ಗಾಮಿ ನೌಕೆಯಿಂದ ದಾಳಿ ನಡೆದಿದ್ದು, ಈ ಘಟನೆಯಲ್ಲಿ ಕನಿಷ್ಠ 87 ನಾವಿಕರು ಮೃತಪಟ್ಟಿದ್ದಾರೆ .

ಇದೀಗ ಇರಾನ್ಗೆ ಸೇರಿದ ಮತ್ತೊಂದು ಯುದ್ಧ ನೌಕೆ ಐರಿಸ್ ಲವನ್ ತಾಂತ್ರಿಕ ದೋಷದ ಹಿನ್ನಲೆ ಕೇರಳದ ಕೊಚ್ಚಿ ಬಂದರಿಗೆ ಲಂಗರು ಹಾಕಿದೆ. ಭಾರತ ಸರ್ಕಾರ ಮಾನವೀಯ ದೃಷ್ಟಿಯಿಂದ ಮಾರ್ಚ್ 1ರಂದು ಡಾಕಿಂಗ್ಗೆ ಅನುಮತಿ ನೀಡಿದ್ದು, ಈ ನೌಕೆ ಮಾರ್ಚ್ 4ರಂದು ಕೊಚ್ಚಿ ಬಂದರಿಗೆ ತಲುಪಿದೆ. ಹಡಗಿನಲ್ಲಿ ಇದ್ದ 183 ಸಿಬ್ಬಂದಿಗೆ ಕೊಚ್ಚಿಯ ನೌಕಾ ಸೌಲಭ್ಯಗಳಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಭಾರತೀಯ ನೌಕಾಪಡೆಯ ಮೂಲಗಳು ತಿಳಿಸಿವೆ.