FILM
ಮತ್ತಷ್ಟು ಹಾಟ್ ಪೋಟೋ ಪೋಸ್ಟ್ ಮಾಡಿ ಟ್ರೋಲ್ ಗಳಿಗೆ ಸವಾಲೆಸೆದ ಇರಾ ಖಾನ್

ಮುಂಬೈ ಮೇ 16: ಬಿಕಿನಿಯಲ್ಲಿ ಬರ್ತಡೇ ಆಚರಿಸಿ ಟ್ರೋಲ್ ಗೆ ಗುರಿಯಾದ ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಇದೀಗ ಮತ್ತೆ ಹಾಟ್ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಟ್ರೋಲ್ ಗಳಿಗೆ ಚಾಲೆಂಜ್ ಹಾಕಿದ್ದಾರೆ.
ಅಮಿರ್ ಖಾನ್ ಪುತ್ರಿ ಇರಾಖಾನ್ ಹುಟ್ಟುಹಬ್ಬ ಆಚರಣೆಯ ಸಂದರ್ಭ ಪೂಲ್ ಪಾರ್ಟಿ ಆಯೋಜಿಸಿದ್ದು ಮತ್ತು ಬಿಕಿನಿ ಧರಿಸಿ ಕೇಕ್ ಕತ್ತರಿಸಿದ್ದರು. ನಂತರ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇರಾ ಖಾನ್, ಬಿಕಿನಿ ಧರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದನ್ನು ಸಾಮಾಜಿಕ ತಾಣಗಳಲ್ಲಿ ಹಲವರು ಟೀಕಿಸಿದ್ದರು. ಅಲ್ಲದೆ, ಹಲವು ಟ್ರೋಲ್‌ಗಳು ಕೂಡ ಸೃಷ್ಟಿಯಾಗಿದ್ದವು.

ಇದೀಗ ಇರಾ ಮತ್ತಷ್ಟು ಫೋಟೊಗಳನ್ನು ಶೇರ್ ಮಾಡಿ, ನನ್ನ ಹಿಂದಿನ ಬರ್ತಡೇ ಫೋಟೋ ಆಚರಣೆಯ ಬಗ್ಗೆ ಎಲ್ಲ ಟ್ರೋಲ್‌ಗಳು ಮತ್ತ ದ್ವೇಷ ಮುಗಿದಿದ್ದರೆ, ಮತ್ತಷ್ಟು ಫೋಟೋಗಳು ಇಲ್ಲಿವೆ ನೋಡಿ ಎಂದು ಅಡಿ ಬರಹ ಕೊಟ್ಟು ಶೇರ್ ಮಾಡಿದ್ದಾರೆ. ಈ ಮೂಲಕ ಟ್ರೋಲ್ ಮಾಡುವವರಿಗೆ ಇರಾ ಸವಾಲೆಸೆದಿದ್ದಾರೆ.