FILM
ಜಿಮ್ ಟ್ರೈನರ್ ಜೊತೆ ಲವ್ವಲ್ಲಿ ಬಿದ್ದ ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್

ಮುಂಬೈ: ಬಾಲಿವುಡ್ ನಟ ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ತನ್ನ ತಂದೆಗೆ ಜಿಮ್ ತರಭೇತಿ ನೀಡಲು ಬರುತ್ತಿದ್ದ ಜಿಮ್ ಟ್ರೈನರ್ ಲವ್ ಲ್ಲಿ ಬಿದ್ದಿರೊದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಬಹಿರಂಗ ಪಡಿಸಿದ್ದಾರೆ.
ನಟ ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಆಮೀರ್ ಖಾನ್‌ಗೆ ಜಿಮ್ ತರಬೇತಿ ನೀಡಲು ಬರುತ್ತಿದ್ದ ಫಿಟ್ನೆಸ್ ಟ್ರೇನರ್ ನೂಪುರ್ ಶಿಖಾರೆ ಜೊತೆ ಇರಾ ಖಾನ್‌ಗೆ ಆಪ್ತತೆ ಬೆಳೆಸಿಕೊಂಡಿದ್ದರು, ಈ ನಡುವೆ ಇಬ್ಬರು ತುಂಬ ಆತ್ಮೀಯವಾಗಿ ಇರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಶುಭ ಸಮಾರಂಭಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಆಗಲೇ ಈ ಜೋಡಿಯ ಮೇಲೆ ಜನರಿಗೆ ಅನುಮಾನ ಮೂಡಿತ್ತು. ಆ ಅನುಮಾನ ಈಗ ನಿಜವಾಗಿದೆ.

ತಾವು ನೂಪುರ್ ಜೊತೆ ಇರುವ ಹಲವು ಫೋಟೋಗಳನ್ನು ಈಗ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿಕೊಂಡಿರುವ ಇರಾ ಅವರು ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ. ಪ್ರಾಮಿಸ್ ಡೇ ಪ್ರಯುಕ್ತ ಅವರು ಪ್ರಿಯಕರನಿಗೆ ಪ್ರೀತಿಯ ಸಂದೇಶ ತಿಳಿಸಿದ್ದಾರೆ. ನೂಪುರ್ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಫೋಟೋಗಳ ಜೊತೆ ‘ನಿನಗೆ ಮತ್ತು ನಿನ್ನ ಜೊತೆ ಪ್ರಾಮಿಸ್ ಮಾಡಲು ಗೌರವದ ಭಾವ ಮೂಡುತ್ತದೆ’ ಎಂದು ಇರಾ ಕ್ಯಾಪ್ಷನ್ ನೀಡಿದ್ದಾರೆ.
ಇರಾ ಮಾಡಿರುವ ಈ ಪೋಸ್ಟ್‌ಗೆ ಅನೇಕ ಸೆಲೆಬ್ರಿಟಿಗಳು ಕಾಮೆಂಟ್ ಮಾಡಿದ್ದಾರೆ. ಫಾತಿಮಾ ಸನಾ ಶೇಕ್, ಗುಲ್ಷನ್ ದೇವಯ್ಯ, ಕರಣ್‌ವೀರ್ ಬೋಹ್ರಾ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ಈ ಜೋಡಿಗೆ ಶುಭ ಹಾರೈಸಿದ್ದಾರೆ. ಇರಾ ಮಾಡಿರುವ ಪೋಸ್ಟ್ ಅನ್ನು ನೂಪುರ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮಿಬ್ಬರ ಪ್ರೀತಿಯನ್ನು ಖಚಿತಪಡಿಸಿದ್ದಾರೆ.